ರಾಜ್ಯ ಡಿಜಿ-ಐಜಿಪಿ ಓಂಪ್ರಕಾಶ್ ಗೆ ವಿದಾಯ
Update: 2017-01-31 10:08 IST
ಬೆಂಗಳೂರು, ಜ.31:ಇಂದು ನಿವೃತ್ತಿಯಾಗುವಾಗ ಒಂದಡೆ ಸಂತೋಷವಾಗುತ್ತದೆ. ಆದರೆ ಇನ್ನೊಂದು ಕಡೆ ದು:ಖವಾಗುತ್ತದೆ. ನಿಷ್ಠೆಯಿಂದ ಕೆಲಸ ಮಾಡಿರುವುದು ತೃಪ್ತಿ ತಂದಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಹೇಳಿದ್ದಾರೆ.
ಮೂವತ್ತೈದು ವರ್ಷಗಳ ಸೇವೆಯ ಬಳಿಕ ನಿವೃತ್ತಿಯಾಗುತ್ತಿರುವ ರಾಜ್ಯ ಪೊಲೀಸ್ ಡಿಜಿ &ಐಜಿಪಿ ಓಂಪ್ರಕಾಶ್ ಅವರು ಇಂದು ತಮಗೆ ಏರ್ಪಡಿಸಲಾಗಿದ್ದ ಬೀಳ್ಕೊಡಿಗೆ ಸಮಾರಂಭದಲ್ಲಿ ಮಾತನಾಡಿದರು.
ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಹಿರಿಯ ಅಧಿಕಾರಿಗಳಿಂದ ನನಗೆ ಉತ್ತಮ ಮಾರ್ಗದರ್ಶನ ಸಿಕ್ಕಿದೆ ಎಂದರು.