×
Ad

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

Update: 2017-01-31 22:50 IST

ಚಿಕ್ಕಮಗಳೂರು,ಜ.31: ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಜೆಟ್‌ನಲ್ಲಿ ಕಿವುಡರಿಗಾಗಿ ಮೀಸಲಾತಿ, ಅಭಿವೃದ್ಧಿಗಾಗಿ ಅನುದಾನವನ್ನು ಮೀಸಲಿಡಬೇಕು ಹಾಗೂ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಿವುಡರ ಕಲ್ಯಾಣ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.


ರಾಜ್ಯದಲ್ಲಿ ಸುಮಾರು 6 ಲಕ್ಷ ಮಂದಿ ಕಿವುಡರಿದ್ದಾರೆ. ನಮಗೆ ಎಲ್ಲಾ ನಾಗರಿಕರಂತೆ ಸಮಾಜದಲ್ಲಿ ಜೀವನ ನಡೆಸಲು ಅಡ್ಡಿಯಾಗುತ್ತಿದೆ. ಸರಕಾರದಿಂದ ಅಗತ್ಯ ಸೌಲಭ್ಯಗಳು ದೊರೆಯುತ್ತಿಲ್ಲ. ಹೀಗಾಗಿ ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ವಿವಿಧ ಬೇಡಿಕೆಗಳನ್ನು ಈಡೇರಿ ಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.


ಪತಿ, ಪತ್ನಿಯರಲ್ಲಿ ಯಾರಾದರೂ ಒಬ್ಬರು ಸರಕಾರಿ ಕೆಲಸದಲ್ಲಿದ್ದರೆ, ಇಬ್ಬರ ೂ ಒಂದೇ ಸ್ಥಳದಲ್ಲಿ ಜೀವನ ಮಾಡಲು ಅನುಕೂಲ ಮಾಡಿಕೊಡಬೇಕು. ಅಂಗವಿಕಲ ದಂಪತಿಗೆ ನೀಡುತ್ತಿರುವ ವಿವಾಹ ಪ್ರೋತ್ಸಾಹ ಧನವನ್ನು ಕಿವುಡ ದಂಪತಿಗೂ ವಿಸ್ತರಿಸಬೇಕು. ಪ್ರತೀ ಜಿಲ್ಲೆಯಲ್ಲೂ ಕಿವುಡರಿಗಾಗಿ ಕಚೇರಿ ತೆರೆಯುವ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿ ಒತ್ತಾಯಿಸಿದ್ದಾರೆ.


 ಇದಕ್ಕೂ ಮುನ್ನ ಕಡೂರಿನಿಂದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವ ಮೂಲಕ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಮಯದಲ್ಲಿ ಗೌರವಾಧ್ಯಕ್ಷ ಕೆ.ಎಚ್. ಶಂಕರ್, ಸಂಘದ ಅಧ್ಯಕ್ಷ ಎ.ಗಣೇಶ್ ರಾವ್, ಪ್ರಧಾನ ಕಾರ್ಯ ದರ್ಶಿ ಎಚ್.ಎಸ್. ದೇವರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
 ಸರಕಾರದ ಗಮನ ಸೆಳೆಯಲು ಪಕ್ಷಾ ತೀತ, ಜಾತ್ಯತೀತವಾಗಿ ಕಿವುಡರಿಗೆ ಬೆಂಬಲ ನೀಡಬೇಕಿದೆ. ರಾಜ್ಯದಲ್ಲಿ ಆರು ಲಕ್ಷ ಜನ ಕಿವುಡರಿದ್ದು, ಅವರಿಗೆ ಸರಕಾರ ಸವಲತ್ತುಗಳನ್ನು ನೀಡಬೇಕಿದೆ. ಸಂಬಂಧಿಸಿದ ಮಂತ್ರಿಗಳು ಬೇಡಿಕೆಗಳನ್ನು ಈಡೇರಿಸಬೇಕಿದೆ. ಧರ್ಮೇಗೌಡ, ಮಾಜಿ ಶಾಸ
ಸದನದಲ್ಲಿ ಸರಕಾರದ ಗಮನ ಸೆಳೆಯಲು ಜಿಲ್ಲೆಯಲ್ಲಿರುವ ನಮ್ಮ ಪಕ್ಷದ ಶಾಸಕರ ಗಮನಕ್ಕೆ ತರಲಾ ಗುವುದು. ಆ ಮೂಲಕ ಕಿವುಡರಿಗೆ ವಿಶೇಷವಾದ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು. ಅಲ್ಲದೆ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರ ಗಮನಕ್ಕೂ ತಂದು ಬೇಡಿಕೆಗಳ ಈಡೇರಿಕೆಗೆ ಬೆಂಬಲ ನೀಡಲಾಗುವುದು.
ಬೆಳ್ಳಿಪ್ರಕಾಶ್, ಬಿಜೆಪಿ ತಾಲೂಕು ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News