ಮನೆಗೆ ನುಗ್ಗಿ 2ಲಕ್ಷ ರೂ. ನಗನಾಣ್ಯ ಕಳವು
Update: 2017-01-31 23:03 IST
ಸಾಗರ, ಜ.31: ಇಲ್ಲಿನ ಗಾಂಧಿನಗರದ ಶ್ಯಾಮಸುಂದರ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಸುಮಾರು 2 ಲಕ್ಷ ರೂ. ಮೌಲ್ಯದ ನಗನಾಣ್ಯಗಳನ್ನು ದೋಚಿ ಪರಾರಿಯಾಗಿರುವ ಘಟನೆ ರವಿವಾರ ಬೆಳಗ್ಗೆ ನಡೆದಿದೆ. ಗಾಂಧಿನಗರದ 2ನೆ ತಿರುವಿನ ಬನಶಂಕರಿ ನಿಲಯದ ನಿವಾಸಿ ಶ್ಯಾಮಸುಂದರ್ ಅವರು, ಊರಿನಲ್ಲಿ ಇಲ್ಲದ ಸಮಯ ನೋಡಿ ಕಳ್ಳರು ಮನೆಯ ಮುಂಬಾಗಿಲಿನ ಇಂಟರ್‌ಲಾಕ್ ಮುರಿದು ಒಳನುಗ್ಗಿ 10ಸಾವಿರ ರೂ. ನಗದು, 700 ಗ್ರಾಂ ಬೆಳ್ಳಿ ಹಾಗೂ 58 ಗ್ರಾಂ ತೂಕದ ಬಂಗಾರದ ಬಳೆಯನ್ನು ಕಳ್ಳತನ ಮಾಡಿದ್ದಾರೆ.
ರವಿವಾರ ಬೆಳಗ್ಗೆ ಮನೆಗೆ ಬಂದ ಶ್ಯಾಂಸುಂದರ್ ಕಳ್ಳತನವಾಗಿರುವ ಘಟನೆಗೆ ಸಂಬಂಧಪಟ್ಟಂತೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.