ಜನಸಾಮಾನ್ಯರಲ್ಲಿ ಮಂದಹಾಸ ಮೂಡಿಸದ ಬಜೆಟ್
ನಿರೀಕ್ಷಿಸಿದಂತೆ ಆರ್ಥಿಕ ಸುಧಾರಣೆಗೆ ಈ ಬಜೆಟ್‌ನಲ್ಲಿ ಸಾಕಷ್ಟು ಒತ್ತು ಸಿಕ್ಕಿದೆ. ವೈಯಕ್ತಿಕ ಆದಾಯ ಮಿತಿಯಲ್ಲಿ 2.50 ಲಕ್ಷ ರೂ.ಗಳಿಂದ 5 ಲಕ್ಷ ರೂ.ವರೆಗೆ ಪಾವತಿಸಬೇಕಾಗಿದ್ದ ತೆರಿಗೆಯ ಪ್ರಮಾಣವನ್ನು ಶೇ.10 ರಿಂದ ಶೇ.5 ಕ್ಕೆ ಇಳಿಕೆ ಮಾಡಿರುವ ಕ್ರಮ ಸ್ವಾಗತಾರ್ಹ. 3 ಲಕ್ಷ ರೂ.ಗಿಂತ ಅಧಿಕ ಮೊತ್ತದ ವಹಿವಾಟಿಗೆ ಕಡಿವಾಣ ಹಾಕಿ ಚೆಕ್, ಆನ್‌ಲೈನ್ ಮೂಲಕ ವ್ಯವಹಾರ ನಡೆಸಲು ಸೂಚನೆ ನೀಡುವ ಮೂಲಕ ‘ಕ್ಯಾಶ್ ಲೆಸ್’ ವ್ಯವಹಾರಕ್ಕೆ ಒತ್ತು ನೀಡುವ ಕೆಲಸ ಮಾಡಲಾಗಿದೆ. ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ಮಿತಿಯನ್ನು 2 ಸಾವಿರ ರೂ.ಗೆ ಮಿತಿಗೊಳಿಸಿರುವುದು ಸ್ವಾಗತಾರ್ಹ. ನೋಟು ಅಮಾನ್ಯೀಕರಣದ ನಂತರ ಆರ್ಥಿಕ ವ್ಯವಸ್ಥೆಗೆ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಹಲವು ಸುಧಾರಣಾ ಕ್ರಮ ಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದೊಂದು ಅತ್ಯುತ್ತಮ, ಆರ್ಥಿಕ ಸುಧಾರಣೆಗೆ ಪೂರಕವಾದ ಬಜೆಟ್ ಆಗಿದೆ.
ಡಿ.ಎಸ್.ಅರುಣ್, ಉದ್ಯಮಿ ಶಿವಮೊಗ್ಗ
ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟ್ ಚಲಾವಣೆ ರದ್ದುಗೊಳಿಸಿದ ನಂತರ ಆರ್ಥಿಕ ವ್ಯವಸ್ಥೆಯಲ್ಲಿ ಉಂಟಾಗಿದ್ದ ಗೊಂದಲ ಪರಿಹಾರಕ್ಕೆ ಬಜೆಟ್‌ನಲ್ಲಿ ಸಾಕಷ್ಟು ಒತ್ತು ಸಿಕ್ಕಿದೆ. ಕ್ಯಾಶ್‌ಲೆಸ್ ವ್ಯವಹಾರಕ್ಕೆ ಉತ್ತೇಜಿಸುವ ಹತ್ತು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಲವೆಡೆ ಕ್ಯಾಶ್‌ಲೆಸ್ ವ್ಯವಹಾರ ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಆರ್ಥಿಕ ಬೆಳವಣಿಗೆಗೆ ಉತ್ತೇಜಕ ಅಂಶಗಳಿವೆ. ಕಪ್ಪು ಹಣ ಚಲಾವಣೆಗೆ ಕಡಿವಾಣ ಹಾಕಲು ಮಹತ್ವದ ನಿರ್ಧಾರ ಮಾಡಿರುವುದು ಸ್ವಾಗತಾರ್ಹ.
ಎನ್.ಗೋಪಿನಾಥ್, ಶಿವಮೊಗ್ಗ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಮುಖಂಡ
ಈಗ ದೇಶದಲ್ಲಿ ಪ್ರತೀ ವರ್ಷ ಬರಗಾಲ ಆವರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ರೈತರ ಸಾಲಮನ್ನಾ ಮಾಡಿ ಅವರ ಪರ ನಿಲ್ಲಬೇಕಿತ್ತು. ಅಲ್ಲದೆ ಮಧ್ಯಮವರ್ಗದ, ರೈತರ ನಿರೀಕ್ಷೆ ಸಂಪೂರ್ಣ ಸುಳ್ಳಾಗಿದೆ. ರೈತರ ಸಾಲ ಮನ್ನಾ, ಬರಪೀಡಿತ ಘೋಷಣೆ ಪರಿಹಾರ, ಆತ್ಮಹತ್ಯೆ ಪರಿಹಾರ ಮತ್ತಿತರ ಯಾವೊಂದು ಕಾರ್ಯಗಳೂ ಬಜೆಟ್‌ನಲ್ಲಿ ಕಾಣಿಸಿಲ್ಲ.
ತೇಜಸ್ವಿ ಪಟೇಲ್, ದಾವಣಗೆರೆ ಜಿಪಂ ಸದಸ್ಯ
ಕಾರ್ಪೊರೇಟ್ ವಲಯ ಮೆಚ್ಚಿಸುವಲ್ಲಿ ಅರುಣ್ ಜೇಟ್ಲಿ ಚಾಣಾಕ್ಷತನ ಮೆರೆದಿದ್ದಾರೆ. ಬಜೆಟ್‌ನಲ್ಲಿ ಬಡವರಿಗೆ ಮನೆ ಕಟ್ಟಿಸಿಕೊಡುವುದಾಗಿ ಹೇಳಲಾಗಿದೆ. ಅದು ಭರವಸೆಯಾಗದೆ ಈಡೇರಿಕೆಯಾಗಬೇಕು. ಇನ್ನು ಹಿರಿಯ ನಾಗರಿಕರಿಗೆ ಆದ್ಯತೆ ನೀಡಿರುವುದು ಉತ್ತಮ.
ಎಚ್.ಕೆ. ರಾಮಚಂದ್ರಪ್ಪ,ಕಾರ್ಮಿಕ ಮುಖಂಡ.,ದಾವಣಗೆರೆ.
ಕಾರ್ಪೊರೇಟ್ ವಲಯ ಮೆಚ್ಚಿಸುವಲ್ಲಿ ಅರುಣ್ ಜೇಟ್ಲಿ ಚಾಣಾಕ್ಷತನ ಮೆರೆದಿದ್ದಾರೆ. ಬಜೆಟ್‌ನಲ್ಲಿ ಬಡವರಿಗೆ ಮನೆ ಕಟ್ಟಿಸಿಕೊಡುವುದಾಗಿ ಹೇಳಲಾಗಿದೆ. ಅದು ಭರವಸೆಯಾಗದೆ ಈಡೇರಿಕೆಯಾಗಬೇಕು. ಇನ್ನು ಹಿರಿಯ ನಾಗರಿಕರಿಗೆ ಆದ್ಯತೆ ನೀಡಿರುವುದು ಉತ್ತಮ.
ಎಚ್.ಕೆ. ರಾಮಚಂದ್ರಪ್ಪ,ಕಾರ್ಮಿಕ ಮುಖಂಡ.,ದಾವಣಗೆರೆ.
ಸಚಿವ ಅರುಣ್ ಜೇಟ್ಲಿ ನಿಜಕ್ಕೂ ಚಾಣಾಕ್ಷತನದ ಬಜೆಟ್ ಮಂಡಿಸಿದ್ದಾರೆ. ಕೇವಲ 98 ಲಕ್ಷವಿದ್ದ ಆದಾಯ ತೆರಿಗೆ ಪಾವತಿದಾರರನ್ನು ಮತ್ತಷ್ಟು ಹೆಚ್ಚಿಸಿ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಆದಾಯ ತೆರಿಗೆ ಹೆಚ್ಚಳಕ್ಕೆ ಕ್ರಮ ಕೈಗೊಂಡು ಸಾಮಾನ್ಯ ತೆರಿಗೆದಾರರಿಗೆ ತುಸು ನೆಮ್ಮದಿ ಕಲ್ಪಿಸಿದ್ದಾರೆ.
ರಾಧೇಶ್ ಜಂಬಗಿ, ತೆರಿಗೆ ಸಲಹೆಗಾರ, ದಾವಣಗೆರೆ.