ಕರಾಟೆ ಚಾಂಪಿಯನ್‌ಶಿಪ್
Update: 2017-02-01 22:43 IST
ಹೊನ್ನಾವರ, ಫೆ.1: ಕಾರವಾರದಲ್ಲಿ ಗೋಜು ರ್ಯೂ ಕರಾಟೆ, ಶೋ ಟೋಕಾನ್ ಕರಾಟೆ ಡೂ ಇವರು ಏರ್ಪಡಿಸಿದ 2ನೆ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ 11ರಿಂದ 13 ವಯೋಮಿತಿಯ ವಿಭಾಗದಲ್ಲಿ ಕಥಾ ಹಾಗೂ ಕುಮಿತೆಯಲ್ಲಿ ಹೊನ್ನಾವರದ ‘ಬಾಲಕಲಾ ಪ್ರವೀಣೆ’ ಪ್ರಶಸ್ತಿ ವಿಜೇತೆ ಶ್ರೀಶಾ ಜಯಂತ ಹರಿಕಾಂತ 2 ಬಂಗಾರದ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಭಟ್, ಶಾಲೆಯ ಪ್ರಾಂಶುಪಾಲ ಜಾನ್.ಪಿ. ಜಾನ್, ಶಿಕ್ಷಕ ವರ್ಗ, ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.