ಸುಳ್ಳು ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ: ಉದ್ಯಮಿ ಬಶೀರ್
ಸಾಗರ, ಫೆ.1: ಸುಳ್ಳು ಪ್ರಕರಣ ವೊಂದರಲ್ಲಿ ನನ್ನನ್ನು ಸಿಲುಕಿಸಿ ಜೈಲು ಶಿಕ್ಷೆ ಅನುಭವಿಸುವಂತೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಹಾಗೂ ಉದ್ಯಮಿ ಟಿಪ್‌ಟಾಪ್ ಬಶೀರ್ ಒತ್ತಾಯಿಸಿದ್ದಾರೆ.
ಬುಧವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾತು ಎಂಬ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಆರೋಪಿಗೂ ನನಗೂ ಯಾವುದೇ ಸಂಬಂಧವಿಲ್ಲ. ಮುನ್ನಾ ಎಂಬಾತನನ್ನು ಕೊಲ್ಲಲು ನಾನು ಸುಪಾರಿ ನೀಡಿದ್ದೇನೆ ಎಂದು ನೀಡಿದ ಹೇಳಿಕೆ ಹಾಸ್ಯಾಸ್ಪದವಾದದ್ದು. ಅಸಲಿಗೆ ಮುನ್ನಾ ಹಾಗೂ ಸಾತು ಎಂಬುವರು ನನಗೆ ಪರಿಚಯವಿಲ್ಲದವರು ಎಂದು ಸ್ಪಷ್ಟಪಡಿಸಿದರು. ಸಾತು ಎಂಬಾತ ನವೆಂಬರ್ ತಿಂಗಳಿನಲ್ಲಿ ನನಗೆ ಕರೆ ಮಾಡಿ ವಕೀಲರಿಗೆ ನೀಡಲು ಹಣ ಕೊಡುವಂತೆ ಕೇಳಿದ್ದಾನೆ. ನಾನು ನೋಡೋಣ ಎಂದು ಹೇಳಿದ್ದೇನೆ.
ಪದೇಪದೇ ಸಾತು ಫೋನ್ ಮಾಡಿ ಹಣ ಕೊಡುವಂತೆ ಪೀಡಿಸಿದಾಗ ನಾನು ಸಾತು ಮಾಡಿದ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ನಂತರ ಸಾತು ನನಗೆ ಫೋನ್ ಮಾಡಲಿಲ್ಲ. ಜನವರಿ ಎರಡನೆ ವಾರದಲ್ಲಿ ನನ್ನ ಕೆಲವು ಸ್ನೇಹಿತರು ಆರೋಪ ಪಟ್ಟಿಯಲ್ಲಿ ನನ್ನ ಹೆಸರು ಇರುವುದನ್ನು ತಿಳಿಸಿದ್ದರು. ನಾನು ಯಾವುದೇ ಆರೋಪದಲ್ಲಿ ಇಲ್ಲದೇ ಇರುವುದರಿಂದ ನಾನು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ ಎಂದರು. ಸಾತುವಿನಂತಹ ಕ್ರಿಮಿನಲ್ ಹಿನ್ನೆಲೆ ಇರುವ ಆರೋಪಿಯ ಮಾತನ್ನು ನಂಬಿ ವೈಯಕ್ತಿಕ ಕಾರಣಕ್ಕಾಗಿ ಕೇರಳದ ಕ್ಯಾಲಿಕಟ್‌ಗೆ ಹೋಗಿದ್ದ ನನ್ನನ್ನು ಪೊಲೀಸರು ವಿಚಾರಣೆ ನೆಪದಲ್ಲಿ ಬಂಧಿಸಿ ಕರೆ ತಂದಿದ್ದಾರೆ. ಇಬ್ಬರು ಕ್ರಿಮಿನಲ್‌ಗಳ ಮುಸುಕಿನ ಗುದ್ದಾಟದಲ್ಲಿ ಕೇಳಿದಷ್ಟು ಹಣ ಕೊಡಲಿಲ್ಲ ಎನ್ನುವ ಕಾರಣಕ್ಕೆ ಸಾತು ನನ್ನ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಪೊಲೀಸರು ಅದನ್ನೆ ಸತ್ಯವೆಂದು ನಂಬಿರುವುದು ನನ್ನ ದುರಾದೃಷ್ಟ ಎಂದು ಹೇಳಿದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂದೆ ತೆಗೆದುಕೊಳ್ಳಬೇಕಾದ ನಿರ್ಧಾರದ ಕುರಿತು ಚರ್ಚೆ ನಡೆಸಲಾಗುತ್ತದೆ.
ಒಂದೊಮ್ಮೆ ನಾನು ಕೊಲೆಗೆ ಸುಪಾರಿ ನೀಡಿರುವುದು ಸಾಬೀತಾದಲ್ಲಿ ನನ್ನನ್ನು ಗಲ್ಲಿಗೆ ಏರಿಸಲಿ. ಪ್ರಕರಣದ ವಿಚಾರಣೆಗೆ ಸಂಬಂಧಪಟ್ಟಂತೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ್ದ ಸೂಕ್ತ ಕಾನೂನು ಕ್ರಮ ಜರಗಿಸಲಿ ಎಂದು ಒತ್ತಾಯಿಸಿದರು. ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಮಾತನಾಡಿದರು. ಗೋಷ್ಠಿಯಲ್ಲಿ ಕನ್ನಡಸೇನೆಯ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ನಗರಸಭೆ ಸದಸ್ಯರಾದ ಫ್ರಾನ್ಸಿಸ್ ಗೋಮ್ಸ್, ತಸ್ರೀಫ್, ಕೃಷ್ಣಮೂರ್ತಿ, ಉದಯಗೌಡ, ಸುನೀಲ್ ಮತ್ತಿತರರು