ಲಾರಿ-ಕಾರು ಮುಖಾಮುಖಿ : ಕಾರು ಸವಾರನ ಸಾವು
ಸುಂಟಿಕೊಪ್ಪ , ಫೆ.3 : ಲಾರಿ ಹಾಗೂ ಕಾರು ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಕಾರು ಸವಾರ ದಿನಮಣಿ (30) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಸುಳ್ಯದ ನಿವಾಸಿ ದಿನಮಣಿ ಶಿಫ್ಟ್ ಡಿಸೈರ್ ಕಾರಿನಲ್ಲಿ (ಕೆಎ.20-ಎನ್.6413) ಕುಶಾಲನಗರಕ್ಕೆ ದಿನಮಣಿ ಹಾಗೂ ತೇಜು ಎಂಬವರು ತೆರಳುತ್ತಿದ್ದಾಗ 7ನೇ ಹೊಸಕೋಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೈಸೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಲಾರಿ (ಕೆಎ19ಡಿ7338) ಹಾಗೂ ಕಾರಿನ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ.
ಸುಳ್ಯದ ಕಡೆಯಿಂದ ವೇಗವಾಗಿ ಆಗಮಿಸಿದ ಕಾರು ಲಾರಿಗೆ ಅಪ್ಪಳಿಸಿದ ಪರಿಣಾಮ ಸವಾರ ದಿನಮಣಿ ಸ್ಥಳದಲ್ಲೆ ಅಸುನೀಗಿದರೆ ಕಾರಿನಲ್ಲಿ ಇನ್ನೋರ್ವ ಪ್ರಯಾಣಿಕ ತೇಜುವಿಗೆ ಕಾಲು ಮುರಿತಕ್ಕೊಳಗಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಮೊಕದ್ದಮೆ ದಾಖಲಾಗಿದ್ದು , ಚಾಲಕನನ್ನು ಬಂಧಿಸಿ ಲಾರಿಯನ್ನು ಲಾರಿ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ದಿನಮಣಿ ಅವರು ಕುಶಾಲನಗರಕ್ಕೆ ತಮ್ಮ ಸಂಬಂಧಿಕರ ಮನೆಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ.