ಅಕ್ರಮ ಮರಳುಗಾರಿಕೆ, ಸಾರಾಯಿ ಮಾರಾಟಗಾರರ ಕೈವಾಡ

Update: 2017-02-06 14:26 GMT

ಗದಗ , ಫೆ.6: ಪೊಲೀಸ್ ಠಾಣೆಗೆ ಬೆಂಕಿ ಪ್ರಕರಣದ ಹಿಂದೆ ಅಕ್ರಮ ಮರಳು ಗಣಿಗಾರಿಕೆಯ ಕರಾಳ ಛಾಯೆ ಕಾಣ್ತಿದೆ. ಅಕ್ರಮ ತಡೆಯಲು ಪೊಲೀಸ್ ಇಲಾಖೆ ಮುಂದಾಗಿದ್ದು ಒಂದೆಡೆಯಾದ್ರೆ, ಮತ್ತೊಂದೆಡೆ ಪಿಎಸ್ಸೈ ಲಂಚಬಾಕತನ ಕಾರಣ ಅನ್ನೋ ಸೂಕ್ಷತೆ ಕಾಣ್ತಿದೆ. ಇನ್ನು ದುಷ್ಕರ್ಮಿಗಳ ಬಂಧನ ಕಾರ್ಯ ಕೂಡ ಮುಂದುವರಿದಿದೆ.

ಪೊಲೀಸ್ ಠಾಣೆಯ ಸ್ವಚ್ಛತೆ ಕಾರ್ಯ.. ಅಳಿದುಳಿದ ದಾಖಲಾತಿಗಳನ್ನು ಸಂಗ್ರಹಿಸುತ್ತಿರೋ ಪೊಲೀಸ್ ಸಿಬ್ಬಂದಿ.. ಇದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರದ ಪೊಲೀಸ್ ಠಾಣೆಯಲ್ಲಿ ಇವತ್ತು ಕಂಡು ಬಂದ ದೃಶ್ಯ. ಹೌದು ನಿನ್ನೆಯಷ್ಟೆ ಬಟ್ಟೂರ್ ಗ್ರಾಮದ ಶಿವಪ್ಪನನ್ನು ಲಾಕಪ್ ಡೆತ್ ಮಾಡಲಾಗಿದೆ ಅನ್ನೋ ಆರೋಪದಿಂದ ಲಕ್ಷ್ಮೇಶ್ವರ ಪೊಲೀಸ್ ಠಾಣೆ ಬೆಂಕಿಗೆ ಆಹುತಿಯಾಗಿತ್ತು. ಸಾವಿರಾರು ಜನ ಉದ್ರಿಕ್ತರು ಠಾಣೆಗೆ ಹಾಗೂ ಪೊಲೀಸ್ ಜೀಪ್‌ಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.

ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದ ಹಿಂದೆ ಅಕ್ರಮ ಮರಳು ಗಣಿಗಾರಿಕೆ ಹಾಗೂ ಅಕ್ರಮ ಸಾರಾಯಿ ಮಾರಾಟಗಾರರ ಕೈವಾಡ ಇದೆ ಅನ್ನೋ ಅಂಶ ಬಯಲಾಗಿದೆ. ಈ ಮೂಲಕ ಬೆಂಕಿ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷಬಾಬು ಅಕ್ರಮ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದರು. ಆದ್ರೆ ಲಕ್ಷ್ಮೇಶ್ವರ ಠಾಣೆ ಪಿಎಸ್ಸೈ ದೇವಾನಂದ ಅವರ ಅಕ್ರಮದಲ್ಲಿ ಪರೋಕ್ಷ ಶಾಮೀಲಾಗಿದ್ದು, ಈ ಅವಘಡಕ್ಕೆ ಕಾರಣವಾಗಿದೆ.

ದೇವಾನಂದ ಅವರ ಲಂಚಬಾಕತನದಿಂದಲೂ ಅಕ್ರಮ ನಡೆಸುವವರು ರೋಸಿ ಹೋಗಿದ್ರು. ಅಕ್ರಮ ತಡೆಯಲು ಮುಂದಾದ ಎಸ್ಪಿ ಅವರ ನಿರ್ಧಾರ ಅಕ್ರಮ ದಂಧೆಕೋರರ ನಿದ್ದೆ ಕೆಡಿಸಿತ್ತು. ಹೀಗಾಗಿ ಪೊಲೀಸರ ಮೇಲೆ ಸೇಡಿಗೆ ಕಾಯುತ್ತಿದ್ದ ಜನರಿಗೆ ಶಿವಪ್ಪನ ಪ್ರಕರಣ ಆಹಾರವಾಯಿತು. ಪಿಎಸ್ಸೈ ಅಕ್ರಮ ದಂಧೆಕೋರರಿಂದ ಹಣ ವಸೂಲಿ ಮಾಡಿಯೂ ಜನರನ್ನು ವಿನಾ:ಕಾರಣ ಕಿರುಕುಳ ಕೊಡ್ತಿದ್ರು ಅನ್ನೋ ಆರೋಪವು ಇದೆ.

   ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದ್ದು, ಸಿಐಡಿ ಎಸ್ಪಿ ದಿವ್ಯಾಸಾರಾ ಥಾಮಸ್‌ನೇತೃತ್ವದ 10 ಜನರ ತಂಡ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು. ಡಿವೈಎಸ್ಪಿ ಶ್ರೀಧರ್ ಪ್ರಕರಣದ ತನಿಖಾಧಿಕಾರಿಯಾಗಿದ್ದು, ಸಹಾ ಯಕ ತನಿಖಾಧಿಕಾರಿ ಎಂ. ಬಿ. ಗೌರವನಕೊಳ್ಳ ಸೇರಿ 10 ಜನರ ಅಧಿಕಾರಿಗಳ ತಂಡ ಆಗಮಿಸಿದೆ.

  ಉತ್ತರ ವಲಯದ ಐಜಿಪಿ ರಾಮಚಂದ್ರ ರಾವ್ ಹಾಗೂ ಗದಗ ಎಸ್ಪಿ ಸಂತೋಷ ಬಾಬು ಜೊತೆ ಚರ್ಚಿಸಿ ಮಾಹಿತಿ ಕಲೆ ಹಾಕಿದ್ದಾರೆ. ಒಟ್ಟಾರೆ ಪ್ರಕರಣದಲ್ಲಿ ಅಕ್ರಮ ಮರಳು ದಂಧೆಕೋರರು ಹಾಗೂ ಅಕ್ರಮ ಸಾರಾಯಿ ಮಾರಾಟಗಾರರು ಶಾಮೀಲಾಗಿದ್ದಾರೆಂಬ ಅಂಶ ಪೊಲೀಸ್ ಮೂಲಗಳು ಬಹಿರಂಗ ಪಡಿ     ಸಿದೆ. ಇನ್ನು ಜಿಲ್ಲಾ ಪೊಲೀಸ್ ಅಧಿಕಾರಿ ಅಕ್ರಮ ದಂಧೆಕೋರರನ್ನು ಮಟ್ಟಹಾಕುವತ್ತ ದಿಟ್ಟ ಹೆಜ್ಜೆ ಇಡ್ತಾಯಿದ್ರೆ, ಮತ್ತೊಂದೆಡೆ ಪಿಎಸ್ಸೈ ಅವರ ಧನಧಾಹ ಆಡಳಿತ ವ್ಯವಸ್ಥೆ ವಿಫಲವಾಗುವಂತೆ ಮಾಡಿದೆ. ಬಟ್ಟೂರು ಗ್ರಾಮ ಹಾಗೂ ಲಕ್ಷ್ಮೇಶ್ವರ ಪಟ್ಟಣದಲ್ಲಿ ವಾತಾವರಣ ತಿಳಿಗೊಂಡಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ.  ಎಗ್ಗಿಲ್ಲದೆ ನಡಿತಿರೋ ಅಕ್ರಮ ಮರಳು ಗಣಿಗಾರಿಕೆಗೆ ಬ್ರೇಕ್ ಹಾಕಲು ಮುಂದಾಗಿದ್ದೆ ತಪ್ಪಾಯ್ತಾ? ಪಿಎಸ್ಸೈ ಉಪಟಳ ಜನಾಕ್ರೋಶಕ್ಕೆ ಕಾರಣವಾಯಿತಾ? ಅಥವಾ ಪೊಲೀಸ್ ಠಾಣೆಗೆ ಬೆಂಕಿ ಪ್ರಕರಣ ಪ್ರಾಯೋಜಿತವೇ ಅನ್ನೋ ಹತ್ತು, ಹಲವು ಪ್ರಶ್ನೆ ಗಳಿಗೆ ಸಿಐಡಿಯ ಪ್ರಾಮಾಣಿಕ ತನಿಖೆಯಿಂದ ಮಾತ್ರ ಉತ್ತರ ಹೊರಬೀಳಲಿದೆ.

ಅಕ್ರಮ ನಡೆಸಲು ತಿಂಗ ಳಿಗೆ ಲಕ್ಷಾಂತರ ಹಣ ಸುಲಿಗೆ ಮಾಡಿಯೂ ಇಲ್ಲದ ಕಿರುಕುಳ ನೀಡುತ್ತಿದ್ದ ಪಿಎಸ್ಸೈ ವಿರುದ್ಧ ಅವಕಾಶಕ್ಕಾಗಿ ಕಾಯುತ್ತಿದ್ದ ಜನರು ಶಿವಪ್ಪನ ಪ್ರಕರಣ ವನ್ನು ಸರಿಯಾಗಿ ಬಳಸಿಕೊಂಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ. ಇನ್ನು ಶಿವ ಪ್ಪನ ಕುಟುಂಬಸ್ಥರು ಮಗನನ್ನು ಕಳೆದುಕೊಂಡ ದುಖ:ದಲ್ಲಿದ್ರೆ, ಅತ್ತ ದುಷ್ಕರ್ಮಿಗಳು ಪೊಲೀಸ್ ಠಾಣೆಗೆ ಬೆಂಕಿ ಹಾಕಿ ತಮ್ಮ ಸೇಡಿನ ದಾಹ ತೀರಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಈ ಸಂಬಂಧ ಈಗಾಗಲೇ 28 ಜನರನ್ನು ಬಂಧಿಸಲಾಗಿದ್ದು, ಪ್ರಕರಣದ ತೆರೆಮರೆಯಲ್ಲಿ ಎಂಥ ಪ್ರಭಾವಿ ಗಳಿದ್ದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News