ಎಚ್1ಎನ್1ಗೆ ವ್ಯಕ್ತಿ ಬಲಿ
Update: 2017-02-06 22:53 IST
ತೀರ್ಥಹಳ್ಳಿ, ಫೆ.6: ತಾಲೂಕಿನ ಆಗುಂಬೆ ಹೋಬಳಿಯ ಹೊನ್ನೇತಾಳು ಗ್ರಾಪಂ ವ್ಯಾಪ್ತಿಯ ವಾರಳ್ಳಿ ಗ್ರಾಮದ ವಿ.ಎಲ್. ನಾಗೇಶ್ (44) ಎಚ್1 ಎನ್1 ಸೋಂಕಿನಿಂದ ಮೃತಪಟ್ಟ ಘಟನೆ ವರದಿಯಾಗಿದೆ.
ಎಚ್1ಎನ್1 ಸೋಂಕಿನಿಂದ ಬಳಲುತ್ತಿದ್ದ ಇವರನ್ನು ಕಳೆದ 10 ದಿನಗಳಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ತಾಲೂಕಿನಲ್ಲಿ ಎಚ್1ಎನ್1 ಸೋಂಕಿನಿಂದ ಮೃತಪಟ್ಟ ಮೊದಲ ವ್ಯಕ್ತಿ ಹಾಗೂ ಮೊದಲ ಪ್ರಕರಣ ಇದಾಗಿದೆ. ಕಳೆದ ವರ್ಷ 12 ಜನರಲ್ಲಿ ಎಚ್1ಎನ್1 ಸೋಂಕು ಕಾಣಿಸಿಕೊಂಡಿದ್ದು, ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದರು. ಈ ಬಾರಿ 17 ಜನರಲ್ಲಿ ಎಚ್1ಎನ್1 ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಕಿರಣ ಪತ್ರಿಕೆಗೆ ತಿಳಿಸಿದ್ದಾರೆ.