×
Ad

ಮೇಧಾಶ್ರೀ ರಾಜ್ಯಮಟ್ಟಕ್ಕೆ ಆಯ್ಕೆ

Update: 2017-02-07 23:19 IST

ಚಿಕ್ಕಮಗಳೂರು, ಫೆ.7: ನಗರದ ಸಾಯಿ ಏಂಜೆಲ್ಸ್ ಶಾಲೆಯ 7ನೆ ತರಗತಿ ವಿದ್ಯಾರ್ಥಿನಿ ಮೇಧಾಶ್ರೀ ಎಂ.ಜೋಯಿಸ್ ಬೆಂಗಳೂರಿನ ಬಾಲ ಭವನದಲ್ಲಿ ನಡೆಯುವ ರಾಜ್ಯ ಮಟ್ಟದ ಕಲಾಶ್ರೀ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾಳೆ.


ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ಪರ್ಧೆಯಿಂದ ಆಕೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಅಲ್ಲದೇ ಮಂಡ್ಯದ ಪ್ರಗತಿಪರ ವೇದಿಕೆ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲೂ ರಾಜ್ಯ ಮಟ್ಟದಲ್ಲಿ ರ್ಯಾಂಕ್ ಗಳಿಸಿ ಕಲಾರತ್ನ ಪ್ರಶಸ್ತಿಗೆ ಪಾತ್ರಳಾಗಿದ್ದಾಳೆ.


 ಶಂಕರ ಟಿ.ವಿ. ವಾಹಿನಿಯಲ್ಲಿ ಪ್ರಸಾರವಾಗುವ ಚಾಂಟ್ ಇಂಡಿಯಾ ಸಂಗೀತದ ರಿಯಾಲಿಟಿ ಶೋನಲ್ಲಿ ಸೆಮಿ ಫೈನಲ್ ತಲುಪಿದ್ದು, ಈ ಕಾರ್ಯಕ್ರಮ ಪ್ರತೀ ರವಿವಾರ ಬೆಳಗ್ಗೆ 10:30ಕ್ಕೆ ಪ್ರಸಾರವಾಗುತ್ತದೆ.

ಮೇಧಾಶ್ರೀ ಬಿಎಸ್ಸೆನ್ನೆಲ್ ಉದ್ಯೋಗಿ ಮುಕುಂದ ಜೋಯಿಸ್ ಮತ್ತು ಸವಿತಾ ದಂಪತಿ ಪುತ್ರಿ. ಭಾರತಿ ಕಲಾಪೀಠ ಸಂಗೀತ ಶಾಲೆಯಲ್ಲಿ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News