ಕಡಬ: ಯುವಕ ಕಾಣೆ; ದೂರು
Update: 2017-02-09 19:32 IST
ಕಡಬ, ಫೆ.9. ಠಾಣಾ ವ್ಯಾಪ್ತಿಯ ಕುಟ್ರುಪ್ಪಾಡಿ ಗ್ರಾಮದ ದೋಳ ನಿವಾಸಿ ಮಾಣಿ ಎಂಬವರ ಪುತ್ರ ರವಿ(23) ಎಂಬಾತ ಫೆಬ್ರವರಿ 8 ಬುಧವಾರದಂದು ಬೆಳಿಗ್ಗೆ ಮನೆಯಿಂದ ಹೋದವನು ಹಿಂತಿರುಗಿ ಬಾರದೆ ಕಾಣೆಯಾಗಿರುವುದಾಗಿ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸಂಬಂಧಿಕರ ಮನೆಗಳಲ್ಲಿ ವಿಚಾರಿಸಲಾಗಿ ಎಲ್ಲೂ ಪತ್ತೆಯಾಗದ ಹಿನ್ನೆಲೆಯಲ್ಲಿ ಕಡಬ ಠಾಣೆಗೆ ದೂರು ನೀಡಲಾಗಿದೆ.
ದುಂಡು ಮುಖದೊಂದಿಗೆ ಗುಂಗುರು ಕೂದಲನ್ನು ಹೊಂದಿರುವ ಈತ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ಶರ್ಟ್ ಧರಿಸಿದ್ದು, ಈತನನ್ನು ಯಾರಾದರೂ ಕಂಡಲ್ಲಿ ಕಡಬ ಪೊಲೀಸು ಠಾಣೆ 08251-260044 ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕಾಗಿ ಕೋರಲಾಗಿದೆ.