ಮನೆಯಲ್ಲಿ ಅಕ್ರಮ ಸಾರಾಯಿ ದಾಸ್ತಾನು
17,500 ರೂ. ವೌಲ್ಯದ ಸಾರಾಯಿ ವಶಕ್ಕೆ
ಹೊನ್ನಾವರ, ಫೆೆ. 11: ತಾಲೂಕಿನ ಕೆಳಗಿನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸಾಂಜೋದ್ ಅಂಥೋನ್ ಹೊರ್ಟಾ ಎಂಬವರ ಮನೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಇರಿಸಿಕೊಂಡಿದ್ದ ಗೋವಾ ರಾಜ್ಯದ ಸಾರಾಯಿಯನ್ನು ಶುಕ್ರವಾರ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡರು.
ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 17,500 ರೂ. ವೌಲ್ಯದ 750 ಮಿ.ಲೀ 70 ಗೋವಾ ಪೆನ್ನಿ ಬಾಟಲಿ (ಒಟ್ಟ್ಟು 52.5 ಲೀಟರ್) ಮದ್ಯವನ್ನು ವಶಪಡಿಸಿಕೊಳ್ಳಲಾಯಿತು. ಕಾರ್ಯಾಚರಣೆಯ ವೇಳೆ ಆರೋಪಿಯು ಪರಾರಿಯಾಗಿದ್ದಾನೆ. ಅಬಕಾರಿ ಉಪ ಅಧೀಕ್ಷಕ ಮಹೇಂದ್ರ ಎಸ್. ನಾಯ್ಕ ಅವರ ನಿರ್ದೇಶನದ ಮೇರೆಗೆ ಅಬಕಾರಿ ಉಪ ನಿರೀಕ್ಷಕ ಶ್ರೀಧರ್ ಎಚ್. ಮಡಿವಾಳ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಹಿರಿಯ ವಾಹನ ಚಾಲಕ ಸೈಯದ್ ಹಮೀದ್, ಅಬಕಾರಿ ರಕ್ಷಕ ಡಿ ಬಿ ತಳೇಕರ್, ಅಬಕಾರಿ ರಕ್ಷಕಿ ದೀಪಾ ನಾಯ್ಕ ಹಾಗೂ ನೌಕರ ಕೇಶವ ತಿಮ್ಮಪ್ಪ ನಾಯ್ಕ, ಹನುಮಂತ ಮಾಸ್ತಿ ಪಟಗಾರ್ ಪಾಲ್ಗೊಂಡಿದ್ದರು.