×
Ad

ದ್ವಿಚಕ್ರ ವಾಹನ ಚಾಲನೆಗೆ ವಿರೋಧ

Update: 2017-02-11 22:38 IST

ಮಡಿಕೇರಿ, ಫೆ.11: ಜಿಲ್ಲೆಯನ್ನು ಗುರಿಯಾಗಿರಿಸಿಕೊಂಡು ಮಡಿಕೇರಿ ನಗರದಲ್ಲಿ ಸಂಸ್ಥೆಯೊಂದು ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡಲು ಮುಂದಾಗಿದ್ದು, ಇದನ್ನು ತುಳುವೆರ ಜನಪದ ಕೂಟದ ಮಡಿಕೇರಿ ತಾಲೂಕು ಘಟಕ ವಿರೋಧಿಸಲಿದೆ ಎಂದು ಘಟಕದ ಅಧ್ಯಕ್ಷ ಪ್ರಭು ರೈ ತಿಳಿಸಿದ್ದಾರೆ.


ಪತ್ರಿಕಾ ಹೇಳಿಕೆ ನೀಡಿರುವ ಅವರು ಟ್ಯಾಕ್ಸಿ ಚಾಲಕರು ಹಾಗೂ ಆಟೊ ಚಾಲಕರ ನಿತ್ಯ ಬದುಕಿಗೆ ದ್ವಿಚಕ್ರ ವಾಹನಗಳ ಬಾಡಿಗೆ ವ್ಯವಸ್ಥೆ ಮಾರಕವಾಗಲಿದೆ. ಇದನ್ನು ತುಳುವೆರ ಜನಪದ ಕೂಟ ವಿರೋಧಿಸುವುದಲ್ಲದೆ ಕಾವೇರಿ ಡ್ರೈವರ್ಸ್‌ ಅಸೋಸಿಯೇಷನ್ ಮತ್ತು ಆಟೊ ಮಾಲಕರ ಸಂಘ ನಡೆಸುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News