ಮುಂಡಗೋಡ: ಯುವತಿ ನಾಪತ್ತೆ
Update: 2017-02-11 22:41 IST
ಮುಂಡಗೋಡ, ಫೆ.11: ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿಹೋದ ಯುವತಿ ನಾಪತ್ತೆಯಾದ ಘಟನೆ ಮುಂಡಗೋಡ ಪಟ್ಟಣದಲ್ಲಿ ನಡೆದಿದೆ.
ನಾಪತ್ತೆಯಾದ ಯುವತಿಯನ್ನು ಗಾಂಧಿನಗರದ ನಿವಾಸಿ ರೋಹಿಣಿ ಜವಾಹರ ನಾಡರ(18) ಎಂದು ತಿಳಿದು ಬಂದಿದೆ. ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿಹೋದವಳು ನಾಪತ್ತೆಯಾಗಿದ್ದಾಳೆ.
ಈ ಕುರಿತು ಯುವತಿಯ ತಂದೆ ಶುಕ್ರವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.