ಓ ಮೆಣಸೆ

Update: 2017-02-12 19:05 GMT

  *ಮೋದಿ ಬಗ್ಗೆ ಎಸ್.ಎಂ.ಕೃಷ್ಣ ಅವರಿಗೆ ಅಪಾರ ಗೌರವವಿದೆ

-ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

ಆ ಗೌರವ ತಮ್ಮ ಪಕ್ಷದ ಮುಖಂಡರ ಮೇಲೆ ಇಲ್ಲದಿರುವುದೇ ಎಲ್ಲ ಸಮಸ್ಯೆಗಳಿಗೆ ಕಾರಣ.

---------------------
  ಸರಕಾರಕ್ಕಿಂತ ಸಂತರ ಮಾತು ಪ್ರಭಾವ ಶಾಲಿ

  - ನರೇಂದ್ರ ಮೋದಿ, ಪ್ರಧಾನಿ

ಅದಕ್ಕೇ ಸಂತರ ಸಂಖ್ಯೆ ಹೆಚ್ಚುತ್ತಿರುವುದು.

---------------------
  ಪ್ರತಿಯೊಂದು ಭಾಷೆಯ ಹಿಂದೆ ಸಂಸ್ಕೃತಿ ಅಡಗಿರುತ್ತದೆ
-ವಿ.ಸುನಿಲ್ ಕುಮಾರ್, ಶಾಸಕ  

ಕೆಲವು ರಾಜಕಾರಣಿಗಳ ಬಾಯಲ್ಲಿ ಭಾಷೆ, ತನ್ನ ಸಂಸ್ಕೃತಿಯನ್ನೇ ಕಳೆದುಕೊಳ್ಳುತ್ತದೆ.

---------------------
  ಗೆಲ್ಲುವ ವಿಶ್ವಾಸವಿಲ್ಲದವರು ಮಾತ್ರ ಮೈತ್ರಿಗೆ ಮುಂದಾಗುತ್ತಾರೆ
- ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ
  
ಕೆಲವರು ಹತ್ಯಾಕಾಂಡಕ್ಕೆ ಮುಂದಾದ ಉದಾಹರಣೆಗಳಿವೆ.

---------------------
  ಮುಖ್ಯಮಂತ್ರಿಯಾಗುವಂತೆ ಪನ್ನೀರ್ ಸೆಲ್ವಂ ನನ್ನನ್ನು ಒತ್ತಾಯಿಸಿದ್ದರು
- ಶಶಿಕಲಾ ನಟರಾಜನ್

ಈಗ ಅವರನ್ನು ಒತ್ತಾಯಿಸುವ ಸರದಿ ನಿಮ್ಮದು.

---------------------
  ಗಾಂಧಿ ಕಂಡ ರಾಮರಾಜ್ಯದ ಕನಸು ನನಸು ಮಾಡುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಚುನಾವಣೆಗೆ ಸಜ್ಜಾಗಬೇಕು
- ಗೋ.ಮಧುಸೂದನ್, ವಿ.ಪ.ಸದಸ್ಯ
  ಗಾಂಧಿ ಚುನಾವಣೆಗೆ ನಿಂತು ರಾಮರಾಜ್ಯದ ಕನಸು ಕಂಡಿರಲಿಲ್ಲ. 

--------------------
  ನಮ್ಮ ಕುಟುಂಬದಲ್ಲಿ ಭಿನ್ನಾಭಿಪ್ರಾಯವಿಲ್ಲ
- ಮುಲಾಯಂ ಸಿಂಗ್ ಯಾದವ್, ಎಸ್ಪಿ ವರಿಷ್ಠ  
ಮಗನ ಅಭಿಪ್ರಾಯವೇ ಅಂತಿಮ, ಅಷ್ಟೇ.

---------------------
  ಸರಕಾರವನ್ನು ಟೀಕಿಸುವುದು ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ
- ಸಿ.ಟಿ.ರವಿ, ಶಾಸಕ
  ನಿಮ್ಮ ಕಿನ್ನರಿಯನ್ನು ಹಿಡಿದುಕೊಂಡು ದಿಲ್ಲಿಗೆ ಯಾಕೆ ಹೋಗಬಾರದು?
---------------------
  ವಿಪಕ್ಷಗಳು ಪ್ರಧಾನಿ ಮೋದಿಯನ್ನು ಪದೇ ಪದೇ ಟೀಕಿಸುತ್ತಿರುವುದರಿಂದ ಅವರು ಹೆಚ್ಚು ಜನಪ್ರಿಯರಾಗುತ್ತಿದ್ದಾರೆ
- ಹೇಮಾಮಾಲಿನಿ, ಸಂಸದೆ
  ಜನಪ್ರಿಯರಾಗುವುದಕ್ಕಾಗಿಯೇ ಪ್ರಧಾನಿ ಮೋದಿ ತಪ್ಪು ಮಾಡುತ್ತಿರಬೇಕಲ್ಲ?
---------------------
  ರಾಜ್ಯಪಾಲರ ಭಾಷಣದಲ್ಲಿ ಉಪ್ಪೂ ಇಲ್ಲ, ಖಾರವೂ ಇಲ್ಲ

-ಕೋನರೆಡ್ಡಿ, ಶಾಸಕ
ಚಿಕನ್ ಟಿಕ್ಕಾ ಎಂದು ನೆಕ್ಕಿ ನೋಡಿರಬೇಕು.

---------------------
 ಕಾಂಗ್ರೆಸ್‌ಗೆ ಕಾರ್ಯಕರ್ತರೇ ಆಸ್ತಿ

-ಧರಂಸಿಂಗ್, ಮಾಜಿ ಮಖ್ಯಮಂತ್ರಿ

ಅಕ್ರಮ ಆಸ್ತಿ ಎಂದರಂತೆ ಮೋದಿ.

---------------------

  ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು ನಿಜ

  -ಡಾ.ಜಿ.ಪರಮೇಶ್ವ್‌ರ್, ಸಚಿವ

ಮಾತಿನ ಮರುಳುಗಾರಿಕೆ ನಿಲ್ಲಿಸಿ, ಕಾನೂನು ಕೈಗೆತ್ತಿಕೊಳ್ಳಿ.

---------------------
  
ನನ್ನನ್ನು ಅರಿಯ ಬೇಕಾದರೆ ಅಧ್ಯಯನ ನಡೆಸಬೇಕು

-ನರೇಂದ್ರ ಮೋದಿ, ಪ್ರಧಾನಿ
  ಹೌದು. ತಮ್ಮ ಶಿಕ್ಷಣಾರ್ಹತೆಯ ಕುರಿತಂತೆ ಅಧ್ಯಯನ ನಡೆಯುತ್ತಿದೆ.

---------------------
  ಕನಸಿನಲ್ಲೂ ಮುಖ್ಯಮಂತ್ರಿ ಆಗೋ ಯೋಚನೆ ಇಲ್ಲ
- ಕೆ.ಎಸ್.ಈಶ್ವರಪ್ಪ, ವಿ.ಪ.ವಿ. ನಾಯಕ
ಬರೇ ವಾಸ್ತವದಲ್ಲಿ ಮಾತ್ರ ಯೋಚನೆ ಇರಬೇಕು.

---------------------
  ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ನಮಗೆ ಸಹೋದರರು
- ರಾಜನಾಥ್ ಸಿಂಗ್, ಕೇಂದ್ರ ಸಚಿವ
  ಅದಕ್ಕೆಂದೇ ಸಹೋದರರ ಮಧ್ಯೆ ಜಗಳ ತಂದಿಕ್ಕುತ್ತಿದ್ದೀರಾ?
---------------------
  ಮೋದಿ ಆಡಳಿತದಲ್ಲಿ ವಿಜಯ ಮಲ್ಯಗೆ ಒಂದು ರೂಪಾಯಿಯ ಲಾಭವೂ ಆಗಿಲ್ಲ
- ಅರುಣ್ ಜೇಟ್ಲಿ, ಕೇಂದ್ರ ಸಚಿವ
  ಒಂದು ರೂಪಾಯಿಯಿಂದ ಅವರಿಗೆ ಏನು ಲಾಭವಿದೆ?
---------------------
ಜಪಾನ್‌ನಲ್ಲಿ ನೆಲೆಸುವವರು ಜಪಾನಿಯರು, ಅಮೇರಿಕದಲ್ಲಿ ನೆಲೆಸುವವರು ಅಮೆರಿಕನ್ನರು, ಹಿಂದೂಸ್ಥಾನ್‌ದಲ್ಲಿ ನೆಲೆಸುವವರು ಹಿಂದೂಗಳು

-ಮೋಹನ್ ಭಾಗವತ್, ಆರೆಸ್ಸೆಸ್ ಸರಸಂಘ ಚಾಲಕ
  ಹಾಗಾದರೆ ಬ್ರಾಹ್ಮಣರೆಲ್ಲ ಎಲ್ಲಿಗೆ ಹೋಗಬೇಕು?
---------------------
ಸರಕಾರದ ನೀತಿ ವಿರೋಧಿಸುವವರಿಗೆ ದೇಶ ವಿರೋಧಿ ಪಟ್ಟ ಕಟ್ಟಲಾಗುತ್ತಿದೆ

-ಎಂ.ವೀರಪ್ಪ ಮೊಯ್ಲಿ, ಸಂಸದ
 ಅದಕ್ಕೆಂದೇ ತಾವು ಬಾಯಿ ಮುಚ್ಚಿ ಕೂತಿರುವುದೇ?

---------------------
  ನರೇಂದ್ರ ಮೋದಿ ಪ್ರಧಾನಿ ಹುದ್ದೆಯ ಘನತೆಗೆ ಕುಂದು ತಂದಿದ್ದಾರೆ
- ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
 ಕುಂದು ತರುವುದು ಅವರ ಘನತೆಯ ಭಾಗವಂತೆ.

---------------------
  ತೋಚಿದಲ್ಲಿಗೆ ಅಟ್ಟಲು ನಾವೇನು ಕುರಿ ಮಂದೆಯಲ್ಲ
- ಕಮಲ ಹಾಸನ್, ನಟ
  ತೋಳವೆಂದು ಒಪ್ಪಿಕೊಳ್ಳುತ್ತೀರಾ
---------------------
  ಮಾಜಿ ಸಿಎಂ ಯಡಿಯೂರಪ್ಪ ಜೈಲಿಗೆ ಹೋಗಿದ್ದಕ್ಕೆ ನಾನು ಖುಷಿ ಪಟ್ಟಿಲ್ಲ
- ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
  ಬದಲು ತನ್ನ ಸರದಿ ಯಾವಾಗ ಎಂದು ಆತಂಕದಲ್ಲಿದ್ದಿರಂತೆ.
---------------------
  ಎಐಎಡಿಎಂಕೆ ಒಂದು ಆಲದ ಮರದಂತೆ. ಅದನ್ನು ಯಾರೂ ಹೈಜಾಕ್ ಮಾಡಲು ಆಗುವುದಿಲ್ಲ
- ಒ.ಪನ್ನೀರ್ ಸೆಲ್ವಂ, ತ.ನಾ.ಹಂಗಾಮಿ ಮುಖ್ಯಮಂತ್ರಿ
  
ತಾವು ಆಲದ ಮರದಡಿಯಲ್ಲಿ ತಪಸ್ಸಿಗೆ ಕೂತ ಮಾರ್ಜಾಲ ಸನ್ಯಾಸಿಯೆಂಬ ಅನುಮಾನ.

---------------------
  ತಮಿಳು ನಾಡು ರಾಜಕೀಯದಲ್ಲಿ ನಾವು ಮೂಗು ತೂರಿಸೋಲ್ಲ

 - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ ಬಾಲ ಮಾತ್ರ ತೂರಿಸುವ ಉದ್ದೇಶವಿರಬೇಕು.

---------------------
ಸಮಾಜ ಸಂಘಟಿತವಾಗಿದ್ದಾಗ ಗುರುಪೀಠಕ್ಕೂ, ಸಮಾಜಕ್ಕೂ ಶಕ್ತಿ ಬರುತ್ತದೆ

-ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ

  ಮಹಿಳೆಯರೂ ಸಂಘಟಿತರಾಗಬೇಕಾದ ಅನಿವಾರ್ಯತೆ ಬಂದಿದೆ
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...