×
Ad

ಕಂಬಳ ಕ್ರೀಡೆಗೆ ಕಾನೂನು ಬಲ

Update: 2017-02-13 13:16 IST

ಬೆಂಗಳೂರು, ಫೆ.13: ವಿಧಾನಸಭೆಯಲ್ಲಿ ಸೋಮವಾರ ಜಾನಪದ ಕ್ರೀಡೆಗಳಾದ ಕಂಬಳ ಹಾಗೂ ಎತ್ತಿನಗಾಡಿ ಓಟಕ್ಕೆ ಸಂಬಂಧಿಸಿದ ವಿಧೇಯಕಕ್ಕೆ ಪಕ್ಷಾತೀತವಾಗಿ ಸದಸ್ಯರು ಒಪ್ಪಿಗೆ ಸೂಚಿಸಿದರು. ಈ ಮೂಲಕ ಕರಾವಳಿಯ ಪ್ರಸಿದ್ಧ ಕ್ರೀಡೆ ಕಂಬಳಕ್ಕೆ ಕಾನೂನು ಬಲ ಬಂದಿದೆ.

ವಿಧೇಯಕದಲ್ಲಿ ಎರಡು ಕ್ರೀಡೆಗೆ ಅವಕಾಶ ಕಲ್ಪಿಸಲಾಗಿದೆ. ಕಂಬಳ ಹಾಗೂ ಎತ್ತಿನಗಾಡಿ ಓಟ ವಿಧೇಯಕದಲ್ಲಿದೆ.

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ಲಭಿಸಿದ ಬಳಿಕ ರಾಜ್ಯದಲ್ಲಿ ಕಂಬಳಕ್ಕೆ ಹೇರಲಾಗಿರುವ ನಿಷೇಧದ ವಿರುದ್ಧ ಕಂಬಳ ಸಮಿತಿ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆಯ ಬಳಿಕ ರಾಜ್ಯ ಸರಕಾರ ತಮಿಳುನಾಡಿನಂತೆಯೇ ಪ್ರಾಣಿಗಳ ಮೇಲಿನ ಹಿಂಸೆ ತಡೆ ಕಾಯ್ದೆ 1960ಗೆ (ಕೇಂದ್ರ ಕಾಯ್ದೆ 59)ತಿದ್ದುಪಡಿ ತರಲು ನಿರ್ಧರಿಸಿತ್ತು.

ಜ.28ರ ಸಂಪುಟ ಸಭೆಯ ನಿರ್ಣಯದಂತೆ ಪ್ರಾಣಿಗಳ ಮೇಲಿನ ಹಿಂಸೆ ತಡೆ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಕಂಬಳ, ಎತ್ತಿನಗಾಡಿ ಕ್ರೀಡೆಯ ಬಗ್ಗೆ ಕಾಯ್ದೆಗೆ ಸದಸ್ಯರ ಒಮ್ಮತದ ಬೆಂಬಲ ಸಿಕ್ಕಿದೆ. ಮುಂದಿನ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಪಶುಸಂಗೋಪನಾ ಇಲಾಖೆಯ ಸಚಿವ ಎ.ಮಂಜು ಮನವಿ ಮಾಡಿಕೊಂಡರು. ಎ ಮಂಜು ಮನವಿಗೆ ಪಕ್ಷಾತೀತವಾಗಿ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.

ಕಂಬಳ ಕ್ರೀಡೆ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡಿನ ಜನಪ್ರಿಯತೆ ಗಳಿಸಿದೆ. ಎತ್ತಿನಗಾಡಿ ಓಟ ಉತ್ತರ ಕರ್ನಾಟಕ ಭಾಗದ ಜಾನಪದ ಕ್ರೀಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News