ರಾಜ್ಯ ಮಟ್ಟದ ಒಲಿಂಪಿಕ್ ಕ್ರೀಡಾಕೂಟ
Update: 2017-02-15 23:00 IST
ನಾಪೊಕ್ಲು, ಫೆ.15: ಹುಬ್ಬಳ್ಳಿ -ಧಾರಾವಾಡದಲ್ಲಿ ಇತ್ತೀಚೆಗೆ ಜರಗಿದ ರಾಜ್ಯ ಮಟ್ಟದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯ ವುಶು ಸಂಸ್ಥೆಯ ವಿದ್ಯಾರ್ಥಿ ನಾಪೊಕ್ಲು ನಿವಾಸಿ ಬಿ.ಸಿ.ರಾಧಾಕೃಷ್ಣ ಅವರು, ಭಾಗವಹಿಸಿ ಕಂಚಿನ ಪದಕ ಪಡೆದುಕೊಂಡಿದ್ದು, ಜಿಲ್ಲೆಗೆ ಮತ್ತು ಸಂಸ್ಥೆಗೆ ಕೀರ್ತಿ ತಂದಿರುವುದಾಗಿ ತರಬೇತಿದಾರರೂ ರಾಜ್ಯ ವುಶು ಸಂಸ್ಥೆಯ ತರಬೇತಿ ದಾರರ ಕಾರ್ಯದರ್ಶಿಯೂ ಆದ ಎನ್.ಸಿ.ಸುದರ್ಶನ್ ತಿಳಿಸಿದ್ದಾರೆ.