×
Ad

ಟೆಕ್ಕಿ ನೇಣಿಗೆ ಶರಣು

Update: 2017-02-15 23:01 IST

ಮೈಸೂರು, ಫೆ.15: ಹೆಚ್ಚು ಸಾಲ ಮಾಡಿಕೊಂಡಿದ್ದ ಸಿವಿಲ್ ಇಂಜಿನಿಯರ್ ಓರ್ವ ಅದನ್ನು ತೀರಿಸಲಾಗದೆ ನೇಣಿಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.


 ಮೃತನನ್ನು ಶ್ರೀರಾಂಪುರದ ಎರಡನೇ ಹಂದಲ್ಲಿ ವಾಸವಿದ್ದ ನವೀನ್ (30) ಎಂದು ಗುರುತಿಸಲಾಗಿದೆ. ನವೀನ್ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ವಿಪರೀತ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಆರ್ಥಿಕ ಮುಗ್ಗಟ್ಟಿನಿಂದ ನೊಂದಿದ್ದ ಈತ ಸಾಲ ಮರುಪಾವತಿಸಲಾಗದೇ ತತ್ತರಿಸಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾನೆ.


ಮೈಸೂರಿನ ಕುವೆಂಪು ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News