9 ತಿಂಗಳ ಹಸೂಗೂಸಿನ ಕತ್ತು ಹಿಸುಕಿ ಕೊಂದ ತಾಯಿ: ಆರೋಪ

Update: 2017-02-16 16:10 GMT

ಬಾಗಲಕೋಟೆ, ಫೆ,16: ತನ್ನ 9 ತಿಂಗಳ ಹಸುಗೂಸನ್ನು ತಾಯಿ ಕತ್ತು ಹಿಸುಕಿ ಕೊಂದ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಜಾಲಿಬೇರ ಕ್ರಾಸ್ ನಲ್ಲಿ ನಡೆದಿದೆ.

ತಾಯಿ ವಿದ್ಯಾ(21) ತನ್ನ 9 ತಿಂಗಳ ಹಸುಗೂಸು ಪಾಂಡಪ್ಪನನ್ನು ಕೊಂದಿದ್ದಾಳೆ ಎಂದು ಆಕೆಯ ಗಂಡ ಕರಿಯಪ್ಪ ಆರೋಪಿಸಿದ್ದಾನೆ. ಕಳೆದ ಎರಡು ವಷ೯ದ ಹಿಂದೆಯಷ್ಟೇ ಕರಿಯಪ್ಪ ಮತ್ತು ವಿದ್ಯಾಳ ಮದುವೆಯಾಗಿತ್ತು. ಕೊಲೆಗೆ ಕಾರಣ ತಿಳಿದುಬಂದಿಲ್ಲ.

 ಮುಧೋಳ ಸರಕಾರಿ ಆಸ್ಪತ್ರೆಯಲ್ಲಿ ಮಗುವಿನ ಶವವಿರಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ  ಲೋಕಾಪೂರ ಠಾಣಾ ವ್ಯಾಪ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News