×
Ad

​ಹೊನ್ನಾಳಿ ಪೊಲೀಸ್ ಠಾಣೆಗೆ ಕಲ್ಲು ತೂರಾಟ ಪ್ರಕರಣ: ನಾಲ್ವರ ಬಂಧನ

Update: 2017-02-16 22:44 IST

ದಾವಣಗೆರೆ, ಫೆ.16: ಹೊನ್ನಾಳಿ ಪೊಲೀಸ್ ಠಾಣೆ ಮೇಲೆ ಬುಧವಾರ ಮಾಲಾಧಾರಿಗಳಿಂದ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ತಿಳಿಸಿದರು.


ನಗರದಲ್ಲಿಂದು ನಡೆದ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪೊಲೀಸ್ ಪೇದೆ ಬೂಟುಗಾಲಿನಿಂದ ಒದ್ದಿದ್ದಾನೆ ಎಂಬುದಾಗಿ ಆರೋಪಿಸಿ ಸೇವಾಲಾಲ್ ಮಾಲಾಧಾರಿಗಳು ಠಾಣೆಗೆ ಮುತ್ತಿಗೆ ಹಾಕಿ, ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ 3 ಪ್ರಕರಣಗಳನ್ನು ದಾಖಲಿಸಲಾಗಿದೆ.

ಮಾಲಾಧಾರಿಗಳನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್‌ನ ಚಾಲಕ ಕರ್ಕಶ ಶಬ್ದದ ಹಾಡು ಹಾಕಿ ರಸ್ತೆಯ ಮಧ್ಯೆ ನಿಲ್ಲಿಸಿದ್ದ. ಅದರಲ್ಲಿದ್ದ ಮಾಲಾಧಾರಿಗಳು ಅಲ್ಲೇ ಪಕ್ಕದ ಹೊಟೇಲ್‌ಗೆ ಹೋಗಿದ್ದ ವೇಳೆ ಪೇದೆ ಟ್ರ್ಯಾಕ್ಟರ್ ರಸ್ತೆ ಬದಿಗೆ ನಿಲ್ಲಿಸಲು ಹೇಳಿದ್ದಾರೆ. ಇದನ್ನು ಕೆಲ ಮಾಲಾಧಾರಿಗಳು ಪೇದೆ ಬೂಟುಗಾಲಿನಿಂದ ಹೊಡೆದಿದ್ದಾರೆಂದು ಸುಳ್ಳು ಹೇಳಿದ್ದಾರೆ.

ಈ ವಿಚಾರ ತಕ್ಷಣ ಎಲ್ಲೆಡೆ ಹರಡಿ, ಸುಮಾರು 5-10 ಸಾವಿರ ಮಂದಿ ಠಾಣೆಯತ್ತ ದೌಡಾಯಿಸಿ ಏಕಾ ಏಕಿ ಕಲ್ಲುತೂರಾಟ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು. ಪರಿಸ್ಥಿತಿ ಕೈಮೀರುವುದನ್ನು ಅರಿತ ಪೊಲೀಸ್ ಸಿಬ್ಬಂದಿ ಗುಂಪನ್ನು ಚದುರಿಸಲು 3 ಬಾರಿ ಗಾಳಿಯಲ್ಲಿ ಅಶ್ರುವಾಯು ಸಿಡಿಸಿದರು. ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News