×
Ad

ಉರೂಸ್ ಆಚರಿಸಲು ಅನುಮತಿಗೆ ಒತ್ತಾಯ

Update: 2017-02-16 22:47 IST

ಚಿಕ್ಕಮಗಳೂರು, ಫೆ.16: ಬಾಬಾಬುಡಾನ್‌ಗಿರಿಯಲ್ಲಿ ಶಾಖಾದ್ರಿ ನೇತೃತ್ವದಲ್ಲಿ ಮಾ.13, 14 ಮತ್ತು 15 ರಂದು ಉರೂಸ್ ಆಚರಿಸಲು ಅನುಮತಿ ನೀಡುವಂತೆ ಒತ್ತಾಯಿಸಿ ಜಿಲ್ಲೆಯ ವಿವಿಧ ಮುಸ್ಲಿಮ್ ಸಂಘಟನೆಗಳು ಸಭೆ ನಡೆಸುವ ಮೂಲಕ ಮುಜರಾಯಿ ಇಲಾಖೆ ಸಹಿತ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.


2015ರ ಸೆ.3ರಂದು ಉಚ್ಚ ನ್ಯಾಯಾಲಯ ನೀಡಿರುವ ಆದೇಶದ ಪ್ರಕಾರ ರಾಜ್ಯ ಸರಕಾರ ತನ್ನ ನಿರ್ಧಾರವನ್ನು ಆದಷ್ಟು ಬೇಗ ಪ್ರಕಟಿಸಬೇಕು. ಆದರೆ ರಾಜ್ಯ ಸರಕಾರದ ನಿರ್ಧಾರ ಆಗುವವರೆಗೆ 2008 ರ ಉಚ್ಚ ನ್ಯಾಯಾಲಯ ಆದೇಶದಂತೆ 1989 ಫೆ.25ರ ಮುಜರಾಯಿ ಆಯುಕ್ತರು ನೀಡಿರುವ ವರದಿ ಪ್ರಕಾರ ನಮಗೆ ಉರೂಸ್ ಆಚರಿಸಲು ಅನುಮತಿ ಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.


ಈ ಸಂದರ್ಭದಲ್ಲಿ ಮುಸ್ಲಿಮ್ ಸಂಘದ ಅಧ್ಯಕ್ಷ ಶಾಯರಿ ಹಸೈನ್, ಟಿಪ್ಪುಸುಲ್ತಾನ್ ಅಧ್ಯಕ್ಷ ಜಂಶೀದ್ ಖಾನ್, ಶಾಖಾದ್ರಿ ಗೌಸ್ ಮೊಹಿದ್ದೀನ್, ಎಸ್ಸೆಸ್ಸೆಫ್‌ನ ಯೂಸುಫ್ ಹಾಜಿ, ಉಪ್ಪಳ್ಳಿ ಬದರಿನಾಥ್, ಜಿಲ್ಲಾ ಮಾಜಿ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ, ಮುಖಂಡರಾದ ರವೀಶ್ ಕ್ಯಾತಬೀಡು ಮತ್ತು ವಿವಿಧ ಮುಸ್ಲಿಮ್ ಸಂಘಟನೆಗಳ ಅಧ್ಯಕ್ಷರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News