ಪತ್ನಿ ಕೊಲೆಗೆ ಯತ್ನಿಸಿದ ಪತಿ ಪೊಲೀಸ್ ವಶಕ್ಕೆ
Update: 2017-02-16 22:48 IST
ಮುಂಡಗೋಡ, ಫೆ.16: ತಾಲೂಕಿನ ಇಂದೂರ ಗ್ರಾಮದ ಅಂಬೇಡ್ಕರ್ ಓಣಿಯಲ್ಲಿ ಫೆಬ್ರವರಿ 10 ರಂದು ರಾತ್ರಿ ಹೆಂಡತಿ ಮೇಲೆ ಸೀಮೆಎಣ್ಣೆ ಸುರಿದು ಕೊಲೆ ಮಾಡಲು ಯತ್ನಿಸಿದ ಇಂದೂರ ಗ್ರಾಮದ ಅಂಬೇಡ್ಕರ ಓಣಿ ನಿವಾಸಿ ಶರೀಫ್ ತಗಡಿನಮನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೃತ್ಯ ನಡೆಸಿದ ನಂತರ ಆರೋಪಿ ತಲೆಮರೆಸಿಕೊಂಡಿದ್ದನು ಬುಧವಾರ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಫಕ್ಕೀರವ್ವ ಶರೀಫ್ ತಗಡಿನಮನಿ(28) ಗಂಡನ ಕೃತ್ಯದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.