ಹುತಾತ್ಮ ಯೋಧರ ಕುಟುಂಬಕ್ಕೆ ಆಸರೆಯಾಗಿ

Update: 2017-02-16 18:30 GMT

ಮಾನ್ಯರೆ,

ಸಿಯಾಚಿನ್ ಗಡಿ ಪ್ರದೇಶದ ಹಿಮದ ಕೆಳಗೆ ಸಿಲುಕಿ ಆರು ದಿನಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಡಿ ಚಿಕಿತ್ಸೆ ಫಲಿಸದೆ ದೇಶಕ್ಕಾಗಿ ಹುತಾತ್ಮರಾದ ಧಾರವಾಡ ಜಿಲ್ಲೆಯ ವೀರ ಯೋಧ ಲಾರೆನ್ಸ್ ನಾಯಕ ಹನುಮಂತಪ್ಪಕೊಪ್ಪದ ಒಂದು ವರ್ಷ ಕೆಳೆದರೂ ಆ ಭಾಗದ ಜನಪ್ರತಿನಿಧಿಗಳು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ ಭರವಸೆಗಳು ಇನ್ನೂ ಈಡೇರಿಸದೇ ಇರುವುದು ದುರಂತವೇ ಸರಿ.ಹುತಾತ್ಮ ಯೋಧನ ಅಶ್ರುತರ್ಪಣದಲ್ಲಿ ಭಾಗಿಯಾಗಿದ್ದ ರಾಜ್ಯ ಸಂಸದರು, ಸಚಿವರು, ಶಾಸಕರು ಮತ್ತು ಇನ್ನಿತರ ಜನಪ್ರತಿನಿಧಿಗಳು ಯೋಧನ ಸಮಾಧಿ ಸ್ಥಳದಲ್ಲಿ ಸ್ಮಾರಕ ಭವನ ನಿರ್ಮಿಸಿ ಕಂಚಿನ ಪುತ್ಥಳಿ ಸ್ಥಾಪಿಸುವುದಾಗಿ ಹೇಳಿ ಜೊತೆಗೆ 4 ಎಕರೆ ಜಮೀನು, ಸರಕಾರಿ ನೌಕರಿ ಮತ್ತು ಇನ್ನಿತರ ಮೂಲ ಸೌಲಭ್ಯಗಳು ನೀಡುವುದಾಗಿ ಭರವಸೆಯನ್ನು ನೀಡಿದ್ದರು. ಆದರೆ ಅವುಗಳಾವವು ಇನ್ನೂ ನಮ್ಮ ಕುಟುಂಬಕ್ಕೆ ತಲುಪಿಲ್ಲವೆಂದು ಯೋಧನ ಪತ್ನಿ ಅಳಲು ತೋಡಿಕೊಂಡಿರುವುದು ವಿಷಾದನೀಯ ಸಂಗತಿ.
 ಈಗಲೂ ಅದೆಷ್ಟೋ ಹುತಾತ್ಮ ಯೋಧರ ಕುಟುಂಬಗಳು ಜನಪ್ರತಿನಿಧಿಗಳ ಭರವಸೆಯ ಸವಲತ್ತುಗಳು ಸಿಗದೆ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿವೆ. ಇವೆಲ್ಲವೂ ಗಮನಿಸಿದಾಗ ನಮ್ಮ ಜನಪ್ರತಿನಿಧಿಗಳು ಹಗಲು ರಾತ್ರಿ, ಗಡುಗು ಸಿಡಿಲು, ಮಳೆ ಚಳಿ ಎಂದು ಲೆಕ್ಕಿಸದೆ ದೇಶವನ್ನು ಕಾಯುವ ಯೋಧರ ಬಗ್ಗೆ ಎಷ್ಟು ಕಾಳಜಿ ಹೊಂದಿದ್ದಾರೆ ಎಂಬುವುದು ತಿಳಿಯುತ್ತದೆ.

Writer - -ಮೌಲಾಲಿ ಕೆ. ಬೋರಗಿ. ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ. ಸಿಂದಗಿ

contributor

Similar News