ಭಾರತ ಕ್ರಿಕೆಟ್ ತಂಡದ ಉದಯೋನ್ಮುಖ ತಾರೆಯ ಹೊಸ ಕಾರು ಇದು. ನಂಬರ್ ಪ್ಲೇಟ್ ನಲ್ಲಿದೆ ಕ್ಲೂ.

Update: 2017-02-17 07:03 GMT

ಹೊಸದಿಲ್ಲಿ, ಫೆ.17: ವೀರೇಂದ್ರ ಸೆಹ್ವಾಗ್ ಅವರ ನಂತರ ಟೆಸ್ಟ್ ಪಂದ್ಯವೊಂದರಲ್ಲಿ ತ್ರಿಶತಕ ಬಾರಿಸಿದ ಎರಡನೆ ಭಾರತೀಯನಾಗಿ ಹೊರಹೊಮ್ಮಿರುವ ಉದಯೋನ್ಮುಖ ಕ್ರಿಕೆಟಿಗ ಕರುಣ್ ನಾಯರ್ ಇತ್ತೀಚೆಗೆ ತಾವು ಖರೀದಿಸಿದ ಹೊಚ್ಚ ಹೊಸಫೋರ್ಡ್ ಮುಸ್ತಾಂಗ್ ಕಾರಿನ ಫೋಟೋವೊಂದನ್ನು ಶೇರ್ ಮಾಡಿದ್ದು ಅದನ್ನು ಅವರ ವೆಲಂಟೈನ್ ಎಂದು ಹೇಳಿಕೊಂಡಿದ್ದಾರೆ.

ಈ ಕಾರಿಗಿಂತ ಹೆಚ್ಚು ಅದರ ನಂಬರ್ ಪ್ಲೇಟ್ ಎಲ್ಲರ ಗಮನ ಸೆಳೆಯುತ್ತಿದೆ. ಕರುಣ್ ಕಾರಿನ ರಿಜಿಸ್ಟ್ರೇಶನ್ ಸಂಖ್ಯೆ ಕೆಎ 03 ಎನ್‌ಎ 303 ಎಂದಾಗಿದೆ. ಕರುಣ್ ಅವರು ವಿಶೇಷವಾಗಿ ಈ ಸಂಖ್ಯೆ ಪಡೆದಿದ್ದಾರೆ. 303 ಸಂಖ್ಯೆ ಒಂದರ್ಥದಲ್ಲಿ ಸಾಂಕೇತಿಕ. ಅದು ಅವರು ತಮ್ಮತ್ರಿಶತಕವನ್ನು ಅವರ ಮೂರನೇ ಟೆಸ್ಟ್ ಇನ್ನಿಂಗ್ಸ್ ನಲ್ಲಿ ದಾಖಲಿಸಿದ್ದರೆಂದು ಇದು ಸೂಚಿಸುತ್ತದ. ಅವರ ಪಂದ್ಯದಲ್ಲಿ ಬಾರಿಸಿದ ರನ್ನುಗಳ ಸಂಖ್ಯೆಯನ್ನೂ ಅದು ಸೂಚಿಸುತ್ತದೆ.

ಕಾರಿನ ನಂಬರ್ ಪ್ಲೇಟಿನಲ್ಲಿರುವ ಕೆಎ ಅವರ ಹೆಸರಿನ ಮೊದಲ ಎರಡು ಅಕ್ಷರಗಳನ್ನು ಸೂಚಿಸುತ್ತಿದ್ದರೆ, ಅದ ನಂತರ 03 ಇದೆ- ಇದು ಅವರ ಮೂರನೇ ಟೆಸ್ಟ್ ಇನ್ನಿಂಗ್ಸ್ ಅನ್ನು ಸೂಚಿಸುತ್ತದೆ. ನಂತರ ಬರುವ ಎನ್‌ಎ ಅವರ ಉಪನಾಮೆ ನಾಯರ್ ಇದರ ಮೊದಲ ಎರಡು ಅಕ್ಷರಗಳನ್ನು ಸೂಚಿಸುತ್ತದೆ. 303 ಅವರ ತ್ರಿಶತಕದ ಸ್ಕೋರ್ ಆಗಿದೆ.

ತಮ್ಮ ಆಕರ್ಷಕ ತ್ರಿಶಕದಿಂದ ಅವರು ತ್ರಿಶತಕ ವೀರರಾದ ಸರ್ ಗ್ಯಾರ್‌ಫೀಲ್ಡ್ ಸೋಬರ್ಸ್ ಹಾಗೂ ಮಾಜಿ ಆಸ್ಟ್ರೇಲಿಯಾ ಕ್ಯಾಪ್ಟನ್ ಬಾಬ್ ಸಿಂಪ್ಸನ್ ಅವರ ಹೆಸರುಗಳಿರುವ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ವೀರೇಂದ್ರ ಸೆಹ್ವಾಗ್ ಅವರು 2004 ಹಾಗೂ 2008ರಲ್ಲಿ ಕ್ರಮವಾಗಿ ತ್ರಿಶತಕಗಳನ್ನು (309 ಹಾಗೂ 319) ಬಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News