×
Ad

ಪಿಎಸ್ಸೈಗೆ ಕರ್ತವ್ಯಕ್ಕೆ ಅಡ್ಡಿ: ಇಬ್ಬರ ವಿರುದ್ಧ ಪ್ರಕರಣ ದಾಖಲು

Update: 2017-02-17 22:39 IST

ಚಿಕ್ಕಮಗಳೂರು, ಫೆ.17: ಮದ್ಯದ ಅಮಲಿನಲ್ಲಿ ಇಬ್ಬರು ಆರೋಪಿಗಳು ಬಾಳೆಹೊನ್ನೂರು ಪೊಲೀಸ್ ಠಾಣೆಯ ಪ್ರೊಬೇಷನರಿ ಪಿಎಸ್ಸೈ ಕೆ.ಪಿ.ಯೋಗೇಶ್ ಅವರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ.


ಬಾಳೆಹೊನ್ನೂರಿನ ಕಗ್ಗಿನರಸ್ತೆ ನಿವಾಸಿ ಜಗನ್ನಾಥ(38) ಮತ್ತು ಕೊಪ್ಪ ತಾಲೂಕು ಸೀಗೋಡು ಎಂಬಲ್ಲಿನ ಸುರಕ್ಷಾ(27) ಆರೋಪಿಗಳಾಗಿದ್ದಾರೆ. ಫೆ.12ರಂದು ಗಸ್ತಿನಲ್ಲಿದ್ದ ಬಾಳೆಹೊನ್ನೂರು ಪಿಎಸ್ಸೈ ರಾತ್ರಿ 11:25ರ ಸಮಯದಲ್ಲಿ ಕಾರಿನಲ್ಲಿ ಮದ್ಯ ಸೇವಿಸುತ್ತಾ, ಆರೋಪಿಗಳು ಹಾಡು ಹಾಡುತ್ತಾ, ಕೂಗಾಟ ಮಾಡುತ್ತಿದ್ದರು.

ಈ ವೇಳೆ ಹತ್ತಿರಕ್ಕೆ ತೆರಳಿ ವಿಚಾರಿಸಿದಾಗ ಏರುಧ್ವನಿಯಲ್ಲಿ ಅವಾಚ್ಯ ಪದದಲ್ಲಿ ನಿಂದಿಸಿ ಪಿಎಸ್ಸೈ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಕುರಿತು ಕೆ.ಪಿ.ಯೋಗೀಶ್ ಅವರು ವರದಿ ನೀಡಿದ ಮೇರೆಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಮೊ.ನಂ. 10/2017 ಕಲಂ 323, 341, 353, 504, 510 ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ಆರೋಪಿತರನ್ನು ದಸ್ತಗಿರಿ ಮಾಡಲಾಗಿದೆ. ಫೆ13ರಂದು ಆರೋಪಿಗಳನ್ನು ಘನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ನ್ಯಾಯಾಲಯದ ಆದೇಶದಂತೆ ಎನ್.ಆರ್.ಪುರ ಉಪ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಎಸ್ಪಿ ಕಚೇರಿ ತಿಳಿಸಿದೆ.


ಫೆ.15ರಂದು ಜಗನ್ನಾಥ ಮತ್ತು ಸುರಕ್ಷಾ ಕೊಪ್ಪ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಅವರು ನೀಡಿದ ಹೇಳಿಕೆ ಮೇರೆಗೆ ಬಾಳೆಹೊನ್ನೂರು ಪೊಲೀಸ್ ಠಾಣಾ ಎನ್.ಸಿ.ಆರ್. ನಂ. 105/2017 ರಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.

ಇದಕ್ಕೂ ಮುನ್ನ ತನಿಖೆ ಕೈಗೊಳ್ಳಲು ಘನ ನ್ಯಾಯಾಲಯದ ಅನುಮತಿ ಪಡೆದುಕೊಳ್ಳಲಾಗಿದೆ. ಪ್ರಕರಣದ ಕುರಿತು ಫೆೆ.17ರಂದು ಬಾಳೆಹೊನ್ನೂರು ಠಾಣೆಯ ಕಾನ್ಸ್‌ಟೇಬಲ್ ಗಿರೀಶ್ ವಿರುದ್ಧ ಮೊ.ನಂ.14/2017 ಕಲಂ 323, 504 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣದ ತನಿಖೆಯನ್ನು ಶೃಂಗೇರಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಿಗೆ ವಹಿಸಲಾಗಿದೆ. ಪ್ರಕರಣದ ತನಿಖೆ ಮುಗಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಚಿಕ್ಕಮಗಳೂರು ಎಸ್ಪಿ ಕಚೇರಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News