ಭಟ್ಕಳ: ರಸ್ತೆ ಅಪಘಾತ; ಇಬ್ಬರು ಗಂಭೀರ
Update: 2017-02-17 22:43 IST
ಭಟ್ಕಳ, ಫೆ.17: ಬೈಕ್ ಹಾಗೂ ಸರಕಾರಿ ಬಸ್ ನಡುವೆ ನಡೆದ ಅಪಾಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಇಲ್ಲಿನ ರಾ.ಹೆ.66ರ ಹೊಟೇಲ್ ಸಿಟಿಲೈಟ್ ಬಳಿ ಜರಗಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ಹನಿಪಾಬಾದ್ ನಿವಾಸಿ ಮೂಸಾ ಹಾಗೂ ಬದ್ರಿಯಾ ಕಾಲನಿಯ ಮುಹಮ್ಮದ್ ಅದ್ನಾನ್ ಎಂದು ಗುರುತಿಸಲಾಗಿದೆ. ಇವರ ಕಾಲಿಗೆ ಬಲವಾದ ಪೆಟ್ಟು ಬಿದ್ದಿದ್ದು, ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರಕ್ಕೆ ಸಾಗಿಸಲಾಗಿದ್ದು, ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.