×
Ad

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರಾಗಿ ಇಸ್ಮಾಯಿಲ್ ಸಖಾಫಿ ಆಯ್ಕೆ

Update: 2017-02-19 20:23 IST

ಗಂಗಾವತಿ ಫೆ 19: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್(ಎಸ್ಸೆಸ್ಸೆಫ್) ರಾಜ್ಯ ಪ್ರತಿನಿಧಿ ಸಮಾವೇಶ ಹಾಗೂ ಮಹಾಸಭೆಯು ಕೊಪ್ಪಳ ಜಿಲ್ಲೆಯ ಗಂಗಾವತಿ ಅಶೋಕ್ ಹೊಟೇಲ್ ಆಡಿಟೋರಿಯಂನಲ್ಲಿ ಇತ್ತೀಚೆಗೆ ನಡೆಯಿತು.

ಈ ಸಂದರ್ಭ ಎಸ್ಸೆಸ್ಸೆಫ್‌ನ 2017-18ರ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಪಿ.ಎ.ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ(ಕೊಡಗು ಜಿಲ್ಲೆ), ಪ್ರಧಾನ ಕಾರ್ಯದರ್ಶಿಯಾಗಿ ಅಡ್ವೋಕೇಟ್ ಕೆ.ಎಂ.ಇಲ್ಯಾಸ್ ನಾವುಂದ(ಉಡುಪಿ ಜಿಲ್ಲೆ), ಕೋಶಾಧಿಕಾರಿಯಾಗಿ ಮುಹಮ್ಮದ್ ಶರೀಫ್ ಬೆಂಗಳೂರು ಆಯ್ಕೆಗೊಂಡರು.

ಉಪಾಧ್ಯಕ್ಷರಾಗಿ ಸೈಯದ್ ಉಮರ್ ಅಸ್ಸಖಾಫ್ ಮದನಿ ತಂಙಳ್ ಮನ್‌ಶರ್ (ದ.ಕ.), ಸೈಯದ್ ಹಾಮೀಂ ಶಿಹಾಬುದ್ದೀನ್ ತಂಙಳ್ ಮೂಡಿಗೆರೆ(ಚಿಕ್ಕಮಗಳೂರು), ಅಸೋಸಿಯೇಟ್ ಪ್ರೆಸಿಡೆಂಟ್: ಮೌಲಾನ ಮುಹಮ್ಮದ್ ಆರಿಫ್ ರಝಾ ತುಮಕೂರು, ಜೊತೆ ಕಾರ್ಯದರ್ಶಿ: ಹಾಫಿಳ್ ಸುಫ್ಯಾನ್ ಸಖಾಫಿ ಗಂಗಾವತಿ (ಕೊಪ್ಪಳ), ಕ್ಯಾಂಪಸ್ ಸೆಕ್ರೆಟರಿ: ಯಾಕೂಬ್ ಮಾಸ್ಟರ್ ಕೊಳಕೇರಿ ( ಕೊಡಗು), ಡೆಪ್ಯೂಟಿ ಸೆಕ್ರೆಟರಿ: ಡಾ.ಖಮರ್ ಝಮಾನ್ ಗುಲಬರ್ಗಾ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಾಫಿಲ್ ಯಾಕೂಬ್ ಸಅದಿ ನಾವೂರು (ದ.ಕ.), ಮುತ್ತಲಿಬ್ ಮೂಡುಬಿದಿರೆ (ದ.ಕ.), ಅಡ್ವಕೇಟ್ ಕೆ.ಎಂ ಶಾಕಿರ್ ಪುತ್ತೂರು (ದ.ಕ.), ರಫೀಕ್ ಸಖಾಫಿ ಚೆರಿಯಪರಂಬು (ಕೊಡಗು), ಅಶ್ರಫ್ ರಝಾ ಅಮ್ಜದಿ (ಉಡುಪಿ), ಅಬುರ್ರವೂಫ್ ಮೂಡುಗೋಪಾಡಿ ( ಉಡುಪಿ), ಉಸ್ಮಾನ್ ಹಂಡುಗುಳಿ (ಚಿಕ್ಕಮಗಳೂರು), ಶಾಹೀನ್ ಅಲಿ ಚಿಕ್ಕಮಗಳೂರು, ಹಸೈನಾರ್ ಆನೆಮಹಲ್ (ಹಾಸನ), ಮುಹಮ್ಮದ್ ಕಮಾಲ್ ಸಕಲೇಶಪುರ (ಹಾಸನ), ಶಾಹುಲ್ ಹಮೀದ್ ಮುಸ್ಲಿಯಾರ್ ನಗರ (ಶಿವಮೊಗ್ಗ), ಶಂಸುದ್ದೀನ್ ಬೆಜ್ಜವಳ್ಳಿ (ಶಿವಮೊಗ್ಗ), ಹಬೀಬ್ ಮುಹಮ್ಮದ್ ಬೆಂಗಳೂರು , ನುಫೈಲ್ ಬೆಂಗಳೂರು , ಸಿ.ಪಿ ಸಿರಾಜುದ್ದೀನ್ ಸಖಾಫಿ ಮೈಸೂರು , ನವಾಝ್ ಭಟ್ಕಳ್ (ಉತ್ತರ ಕನ್ನಡ ), ಮುಸ್ತಫಾ ನಯೀಮಿ ಸವಣೂರು (ಹಾವೇರಿ), ಅಸ್ಲಂ ರಝಾಖಾನ್ (ತುಮಕೂರು), ಹನೀಫ್ ರಝಾ (ಬಿಜಾಪುರ), ಅಬ್ದುರ್ರಹ್ಮಾನ್ ಮೊಗರ್ಪಣೆ, ಸುಳ್ಯ (ದ.ಕ.), ಇಬ್ರಾಹೀಂ ಮೂಡಿಗೆರೆ (ಚಿಕ್ಕಮಗಳೂರು), ಇಕ್ಬಾಲ್ ರಾಣಿಬೆನ್ನೂರು, ಮುನೀರ್ ಮದನಿ ಮೈಸೂರು, ಸೈಯದ್ ಮುಖ್ತಾರ್ ದಾವಣಗೆರೆ, ಡಾ.ವಾಸಿಂ ಕಿಲ್ಕರ್ ಬಾಗಲಕೋಟೆ, ಗುಲಾಂ ಹುಸೈನ್ ರಝ್ವಿ ಕೊಪ್ಪಳ ರವರನ್ನು ಆಯ್ಕೆ ಮಾಡಲಾಯಿತು.

ಸುಪ್ರೀಂ ಕೌನ್ಸಿಲ್ ಚೇರ್‌ಮೆನ್: ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್, ಕನ್ವೀನರ್: ಎಂ.ಬಿ.ಎ ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು , ಸದಸ್ಯರಾಗಿ, ಎಸ್.ಪಿ ಹಂಝ ಸಖಾಫಿ, ಪಿ.ಪಿ ಅಹ್ಮದ್ ಸಖಾಫಿ, ಜಿ.ಎಂ.ಎಂ ಕಾಮಿಲ್ ಸಖಾಫಿ, ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಎನ್.ಕೆ.ಎಂ ಶಾಫಿ ಸಅದಿ ಬೆಂಗಳೂರು, ಎಂ.ವೈ ಅಬ್ದುಲ್ ಹಫೀಲ್ ಸಅದಿ ಕೊಡಗು, ಯಾಕೂಬ್ ಯೂಸುಫ್ ಹೊಸನಗರ, ಅಬ್ದುಲ್ ಹಮೀದ್ ಬಜಪೆ, ಕೆ.ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿಯವರನ್ನು ನೇಮಿಸಲಾಯಿತು.

  ಕರ್ನಾಟಕ ಜಂ ಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್.ಪಿ ಹಂಝ ಸಖಾಫಿ ಸಭೆಯ ಅಧ್ಯಕ್ಷತೆ ವಹಿಸಿದರು. ಎಸ್ಸೆಸ್ಸೆಫ್ ಅಖಿಲ ಭಾರತ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಸುಪ್ರೀಂ ಕೌನ್ಸಿಲ್ ಚೇರ್‌ಮೆನ್ ಎಮ್ಮೆಸ್ಸೆಂ ಝೈನಿ ಕಾಮಿಲ್ ನೂತನ ಸಮಿತಿಗೆ ಪ್ರತಿಜ್ಞೆ ಬೋಧಿಸಿದರು.

ನಿಕಟಪೂರ್ವ ರಾಜ್ಯಾಧ್ಯಕ್ಷ ಎನ್.ಕೆ.ಎಂ ಶಾಫಿ ಸಅದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಮುಸ್ಲಿಮ್ ಜಮಾಅತ್ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಅಬೂ ಸುಫ್ಯಾನ್ ಮದನಿ ಮುಖ್ಯ ಭಾಷಣ ಮಾಡಿದರು.

ಎಂ.ಬಿ.ಎಂ ಸ್ವಾದಿಕ್ ಮಾಸ್ಟರ್ ಸ್ವಾಗತಿಸಿ ,ಇಲ್ಯಾಸ್ ನಾವುಂದ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News