×
Ad

ಟಂಟಂ-ಟ್ಯಾಂಕರ್ ಡಿಕ್ಕಿ; 8 ಸಾವು

Update: 2017-02-20 20:06 IST

ಯಾದಗಿರಿ, ಫೆ.20: ಟಂಟಂ ಮತ್ತು ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಟಂಟಂನಲ್ಲಿದ್ದ 8ಮಂದಿ ಮೃತಪಟ್ಟ ಘಟನೆ ಯಾದಗಿರ ತಾಲೂಕಿನ ರಾಮಸಮುದ್ರ ಎಂಬಲ್ಲಿ ಸಂಭವಿಸಿದೆ.
ದುರ್ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ. ಈಪೈಕಿ 5 ಮಂದಿಯ ಸ್ಥಿತಿ ಗಂಭೀರವಾಗಿದೆ. ಮೃತಪಟ್ಟವರು ಡಣಾಪುರದವರು.  ಅವರೆಲ್ಲ ಶಹಾಪುರದಲ್ಲಿ ಎಂಗೇಜ್‌ ಮೆಂಟ್‌  ಮುಗಿಸಿ ಡಣಾಪುರಕ್ಕೆ ಟಂಟಂನಲ್ಲಿ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಟ್ಯಾಂಕರ್‌ ಹೈದರಾಬಾದ್‌ನಿಂದ ವಾಡಿಗೆ ತೆರಳುತ್ತಿತ್ತು.
ಗಾಯಗೊಂಡವರನ್ನು ಯಾದಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾದಗರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News