12 ಕುಖ್ಯಾತ ದರೋಡೆಕೋರರ ಬಂಧನ

Update: 2017-02-22 09:05 GMT

ಬೆಂಗಳೂರು, ಫೆ.22: ನಗರದಲ್ಲಿ ದರೋಡೆ ಕೃತ್ಯಗಳಲ್ಲಿ ಸಕ್ರಿಯವಾಗಿದ್ದ 12 ಕುಖ್ಯಾತ ದರೋಡೆಕೋರರ ತಂಡವನ್ನು ಬಂಧಿಸಿರುವ ಕೆಂಪೇಗೌಡ ಠಾಣೆಯ ಪೊಲೀಸರು 17 ಪ್ರಕರಣಗಳನ್ನು ಬೇಧಿಸಿದ್ದಾರೆ.

ಬಂಧಿತರ ಪೈಕಿ ಆರು ಜನ ಬಾಲಾಪರಾಧಿಗಳಾಗಿದ್ದು, ಬಂಧಿತರಿಂದ ಲಕ್ಷಾಂತರ ರೂ.ಬೆಲೆಬಾಳುವ 24 ಮೊಬೈಲ್‌ಗಳು, 19 ದ್ವಿಚಕ್ರ ವಾಹನಗಳು, ವಿವಿಧ ಮಾರಕಾಸ್ತ್ರಗಳು, ಹಾಗೂ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News