10 ಬೈಕ್ ಕದ್ದಿದ್ದ ಇಬ್ಬರು ಅಪ್ರಾಪ್ತರು!

Update: 2017-02-22 11:33 GMT

ಶಿವಮೊಗ್ಗ, ಫೆ. 22: ಶಿವಮೊಗ್ಗ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸರಿಸುಮಾರು 10 ಬೈಕ್ ಕಳವು ಮಾಡಿ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರನ್ನು  ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವನಗುಡಿ ಬಡಾವಣೆಯಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದ ವೇಳೆ, ಈ ಇಬ್ಬರು ಆಪಾದಿತ ಬಾಲಕರು ಬೈಕ್‌ವೊಂದರ ಕಳವಿಗೆ ಹೊಂಚು ಹಾಕುತ್ತಿದ್ದುದು ಕಂಡುಬಂದಿತ್ತು. ತಕ್ಷಣವೇ ಗಸ್ತಿನಲ್ಲಿದ್ದ ಪೊಲೀಸರು ಇವರನ್ನು ವಶಕ್ಕೆ ಪಡೆದುಕೊಂಡಿದ್ದರು.

ವಿಚಾರಣೆಯ ವೇಳೆ ಬಾಲಕರು ನಗರದ ಜಯನಗರ, ತುಂಗಾನಗರ, ವಿನೋಬನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸರಿಸುಮಾರು 10 ಬೈಕ್ ಅಪಹರಿಸಿದ್ದ ಮಾಹಿತಿ ಬೆಳಕಿಗೆ ಬಂದಿತ್ತು. ಇದು ಪೊಲೀಸರನ್ನೇ ದಂಗು ಬಡಿಯುವಂತೆ ಮಾಡಿತ್ತು!

ವಶಕ್ಕೆ ಪಡೆದಿರುವ ಬೈಕ್‌ಗಳ ಮೌಲ್ಯ ಸರಿಸುಮಾರು 2.50 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ಬಂಧಿತ ಬಾಲಕರು ಅಪ್ರಾಪ್ತ ವಯಸ್ಸಿನವರಾಗಿರುವ ಕಾರಣದಿಂದ ಅವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ರೀತ್ಯ ಬಾಲ ನ್ಯಾಯ ಮಂಡಳಿಯ ಮುಂಭಾಗ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News