ಸಮಸ್ಯೆಗಳ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಎಸ್ಪಿ ಅಣ್ಣಾಮಲೈ

Update: 2017-02-23 17:36 GMT

ಮೂಡಿಗೆರೆ, ಫೆ.23: ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿರುವ ಕುಡಿತ, ಜೂಜು, ಮಟ್ಕಾ ಮತ್ತಿತರ ಚಟಗಳ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯವೆಂದು ಎಸ್ಪಿಅಣ್ಣಾಮಲೈ ಹೇಳಿದರು.


ಅವರು ಜನ್ನಾಪುರ ವರ್ತಕರ ಸಮುದಾಯ ಭವನದಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪ್ರಗತಿಬಂಧು ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದಿಂದ ಆಯೋಜಿಸಿದ್ದ ವಲಯ ಮಟ್ಟದ ಪ್ರಗತಿ ಸಾಧನೆ ಸಮಾವೇಶದಲ್ಲಿ ಮಾತನಾಡಿದರು. ಸರಕಾರ ಎಲ್ಲವನ್ನೂ ಒದಗಿಸಲು ಸಾಧ್ಯವಿಲ್ಲ. ಸರಕಾರದ ವಾರ್ಷಿಕ 1.63 ಲಕ್ಷ ಕೋಟಿ ರೂ. ಬಜೆಟ್ ಅನುಗುಣವಾಗಿ ಅಭಿವೃದ್ಧಿ ಮಾಡುತ್ತದೆ. ಸಂಘಸಂಸ್ಥೆಗಳು ಕೂಡ ಜನರ ಸಮಸ್ಯೆಗಳತ್ತ ಗಮನಹರಿಸಿದರೆ ಸರಕಾರದ ಹೊರೆಯೂ ತಗ್ಗಲಿದೆ ಎಂದರು.


ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಎಲ್ಲವೂ ಅಭಿವೃದ್ಧಿಯಾಗಿದೆ. ಗ್ರಾಮಗಳ ಅಭಿವೃದ್ಧಿ ಜೊತೆಗೆ ಜನರ ಅಭಿವೃದ್ದಿ ಕೂಡ ಆಗಿದೆ. ಬ್ಯಾಂಕ್‌ಗಳಿಂದ ಸಾಲ ಪಡೆದು ಕಟ್ಟಲು ಹಿಂದೇಟು ಹಾಕಿದ ನಿದರ್ಶನಗಳಿವೆ. ಆದರೆ, ಸಂಘ ಸಂಸ್ಥೆಗಳಿಂದ ಸಾಲ ಪಡೆದವರು ಶೇ.100ರಷ್ಟು ಸಾಲ ಮರು ಪಾವತಿಸುತ್ತಾರೆ. ಅಂಗಡಿ, ಹೊಟೇಲ್ ನಡೆಸಿ ಜೀವನಕ್ಕೆ ದಾರಿ ಕಂಡುಕೊಳ್ಳುತ್ತಾರೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಎಸ್ಪಿ ಅಣ್ಣಾಮಲೈ ಹಾಗೂ ಗೌರವ ಡಾಕ್ಟರೇಟ್ ಪದವಿ ಪಡೆದ ಬಣಕಲ್ ಠಾಣೆಯ ಮುಖ್ಯ ಪೇದೆ ಗೋಣಿಬೀಡಿನ ನಿವಾಸಿ ಡಾ. ಸಿ.ಆರ್.ಮೋಹನ್ ಕುಮಾರ್, ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕ ನಿಡಗೂಡು ಗ್ರಾಮದ ನಿವಾಸಿ ಡಾ. ಎಸ್.ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸೌಮ್ಯಾ ಸತೀಶ್, ಪ್ರಕಾಶ್ ಕುಮಾರ್, ಪ್ರಶಾಂತ್ ಚಿಪ್ರಗುತ್ತಿ ಗೀತಾ, ತಾಲೂಕು ಯೋಜನಾಧಿಕಾರಿ ಸಂಜೀವ ನಾಯಕ್, ವಿಮಲಾ, ಜೆ.ಜಿ.ಅನಿಲ್‌ಕುಮಾರ್, ಶಿವಲಕ್ಷ್ಮೀ, ಕುಸುಮ, ಹೇಮಾವತಿ, ಮಮತಾ, ನಾಗರತ್ನಾ, ರಶ್ಮಿ, ಉಷಾ, ಉಮೇಶ್, ಆದರ್ಶ, ರಘು ಮತ್ತಿತತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News