×
Ad

ಕಾರು-ಬೈಕ್ ಢಿಕ್ಕಿ: ವಿದ್ಯಾರ್ಥಿ ಮೃತ್ಯು

Update: 2017-02-26 22:46 IST

ವೀರಾಜಪೇಟೆ, ಫೆ.26: ವೀರಾಜಪೇಟೆ-ಗೋಣಿಕೊಪ್ಪ ರಸ್ತೆಯ ಅಂಬಟ್ಟಿ ತಿರುವಿನಲ್ಲಿ ಶನಿವಾರ ನಡೆದ ರಸ್ತೆ ಅಪಘಾತದಲ್ಲಿ ವೀರಾಜಪೇಟೆ ಸೈಂಟ್ ಆನ್ಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಆಕಾಶ್ (17) ನಿಧನ ಹೊಂದಿದ್ದಾರೆ.


ಈತ ವೀರಾಜಪೇಟೆಯಲ್ಲಿ ಪರೀಕ್ಷೆ ಮುಗಿಸಿಕೊಂಡು ಪೊನ್ನಂಪೇಟೆಯ ದೇವಾಲಯವೊಂದರಲ್ಲಿ ನಡೆಯಲಿರುವ ಪೂಜಾ ಕಾರ್ಯಕ್ರಮಕ್ಕೆ ತೆರಳುವಾಗ ಅಪಘಾತ ಸಂಭವಿಸಿತೆನ್ನಲಾಗಿದೆ.


ಗೋಣಿಕೊಪ್ಪಕಡೆಯಿಂದ ಬಂದ ಕಾರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಆಕಾಶ್ ರಸ್ತೆಗೆ ಉರುಳಿದ್ದು, ಕಾರಿನ ಚಕ್ರ ದೇಹದ ಮೇಲೆ ಚಲಿಸಿದೆ. ತೀವ್ರ ಗಾಯಗೊಂಡ ಆಕಾಶ್‌ನನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಕೊಂಡೆ ೂಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಕಾರು ಚಾಲಕ ಕೇರಳದ ಕಲ್ಲಿಕೋಟೆಯ ಅಜಯ್‌ನನ್ನು ವೀರಾಜಪೇಟೆ ನಗರ ಪೋಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News