ಪೊಲೀಸ್ ವಿಚಾರಣೆಗೆ ಭಯಪಟ್ಟು ವ್ಯಕ್ತಿ ಆತ್ಮಹತ್ಯೆ
ತುಮಕೂರು, ಫೆ.27: ಪೊಲೀಸ್ ವಿಚಾರಣೆಗೆ ಭಯಪಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧುಗಿರಿ ತಾಲೂಕು ಬಿಜವರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ನರಸಿಂಹಯ್ಯ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಗ್ರಾಮದ ಯುವಕ ಯುವತಿ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಈತನನ್ನು ಪದೇ ಪದೇ ವಿಚಾರಣೆಗೆ ಪೊಲೀಸರು ಕರೆಯುತ್ತಿದ್ದರು ಎನ್ನಲಾಗಿದೆ.
ಇದರಿಂದ ಮಾನಸಿಕವಾಗಿ ಖಿನ್ನರಾಗಿದ್ದ ನರಸಿಂಹಯ್ಯ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದರಿಂದ ನೊಂದ ಸಂಬಂಧಿರು ಆಸ್ಪತ್ರೆ ಎದುರು ಧರಣಿ ನಡೆಸಿದ್ದಾರೆ ಎನ್ನಲಾಗಿದೆ.
ಹಿನ್ನೆಲೆ:
ಕಳೆದ ಒಂದು ತಿಂಗಳ ಹಿಂದೆ ಬಿಜವಾರ ಗ್ರಾಮದ ಅಭಿಲಾಷ್ ಮತ್ತು ಅನುಷಾ ಯುವಕ ಯುವತಿ ಕಾಣೆಯಾಗಿದ್ದರ ಹಿನ್ನೆಲೆಯಲ್ಲಿ ಅದೇ ಗ್ರಾಮದ ಹಾಗೂ ಅಭಿಲಾಷನ ಭಾವನಾದ ನರಸಿಂಹಯ್ಯ ತಮ್ಮ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪಟ್ಟಣದ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಾಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಯುವಕ ಯುವತಿ ಕಾಣೆಯಾಗಿದ್ದು ಅವರ ವಿಚಾರ ನರಸಿಂಹಯ್ಯ ನವರಿಗೆ ತಿಳಿದಿದೆ ಎಂದು ಮಧುಗಿರಿ ಪೋಲೀಸ್ ಠಾಣೆಯ ಪೇದೆ ಮುತ್ತು ರಾಜ್ ಎಂಬುವವರು ಪ್ರತಿ ದಿನ ನರಸಿಂಹಯ್ಯ ವಿಚಾರಿಸುತ್ತಿದ್ದರು. ಈ ವಿಷಯದಿಂದ ಮನನೊಂದು ತಮ್ಮ ಮನೆಯಲ್ಲಿ ಮೆಟಾಸೀಡ್ ಕುಡಿದಿದ್ದರು.