ಕೃಷ್ಣಮ್ಮ ನಿಧನ: ಸಂತಾಪ
Update: 2017-02-27 23:03 IST
ಚಿಕ್ಕಮಗಳೂರು, ಫೆ.27: ಮಾಜಿ ಶಾಸಕ ಎಸ್.ಆರ್.ಲಕ್ಷ್ಮಯ್ಯನವರ ಧರ್ಮಪತ್ನಿ ಕೃಷ್ಣಮ್ಮ (85) ಎಂಬವರು ಸೋಮವಾರ ನಿಧನರಾಗಿದ್ದಾರೆ. ಇವರಿಗೆ ನಾಲ್ಕು ಗಂಡು,ಎರಡು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಸಂತಾಪ: ಶಾಸಕರಾದ ವೈ.ಎಸ್.ದತ್ತ, ಬಿ.ಬಿ.ನಿಂಗಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್,ಮಾಜಿ ಅಧ್ಯಕ್ಷ ಎಚ್.ಎಸ್.ಮಂಜಪ್ಪ, ರಾಜ್ಯ ಪ್ರಧಾನ ಕಾಯದರ್ರ್ಶಿ ಎಚ್.ಎಚ್.ದೇವರಾಜ್, ಎಚ್.ಟಿ.ರಾಜೇಂದ್ರ, ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ, ರಾಷ್ಟ್ರೀಯ ವಕೀಲರ ಪರಿಷತ್ ಉಪಾಧ್ಯಕ್ಷ ಎಸ್.ಎಲ್.ಬೋಜೇಗೌಡ, ಜೆಡಿಎಸ್ ಮುಖಂಡರಾದ ಹೊಲದಗದ್ದೆ ಗಿರೀಶ್, ಜಿ.ಎಸ್.ಚಂದ್ರಪ್ಪ, ಎಂ.ಡಿ.ರಮೇಶ್, ಎಚ್.ಎನ್.ಕೃಷ್ಣೇಗೌಡ, ಜಯರಾಜ್‌ಅರಸ್, ಡಿ.ಆರ್.ಉಮಾಪತಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ತೀವ್ರ ಸಂತಾಪ ಸೂಚಿಸಿದ್ದಾರೆ.