ಆಗುಂಬೆ: ಅಂಗಡಿಗೆ ನುಗ್ಗಿದ ಬಸ್; ಡ್ರೈವರ್ ಸ್ಥಳದಲ್ಲಿಯೇ ಸಾವು
Update: 2017-02-28 17:33 IST
ಆಗುಂಬೆ, ಫೆ.೨೮: ಆಗುಂಬೆ ಸಮೀಪ ಗುಡ್ಡೇಕೇರಿ ಎಂಬಲ್ಲಿ ’ಶಿವಶಂಕರ್’ ಹೆಸರಿನ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದೆ.
ಅಂಗಡಿಯ ಸರಳುಗಳು ಬಸ್‌ನ ಮುಂಭಾಗದ ಗಾಜು ಸೀಳಿದ್ದರಿಂದ ಡ್ರೈವರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಒಬ್ಬರನ್ನು ಮಣಿಪಾಲಕ್ಕೆ, ಇನ್ನೊಬ್ಬರನ್ನು ತೀರ್ಥಹಳ್ಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
10 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಮೃತಪಟ್ಟ ಚಾಲಕನನ್ನು ಶ್ರೀಕಂಠ ಎಂದು ಗುರುತಿಸಲಾಗಿದೆ.
ಬಸ್ ಉಡುಪಿಯಿಂದ ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿತ್ತು, ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.