ಶಿವಮೊಗ್ಗ: ತ್ರಿವಳಿ ಮಕ್ಕಳಿಗೆ ಜನ್ಮವಿತ್ತ ತಾಯಿ
Update: 2017-03-01 20:07 IST
ಶಿವಮೊಗ್ಗ, ಮಾ. 1: ತಾಯಿಯೋರ್ವಳು ಮೂರು ಮಕ್ಕಳಿಗೆ ಜನ್ಮವಿತ್ತ ಘಟನೆ ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ವರದಿಯಾಗಿದೆ. ತಾಯಿ-ಮಕ್ಕಳ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನವರಾದ ಇಬ್ರಾಹಿಂ ಸಾಬ್ ಎಂಬುವರ ಪತ್ನಿ ಯಾಸ್ಮಿನ್‌ತಾಜ್ ಎಂಬುವರೇ ತ್ರಿವಳಿ ಮಕ್ಕಳಿಗೆ ಜನ್ಮವಿತ್ತವರಾಗಿದ್ದಾರೆ. ಮೂರ ಮಕ್ಕಳಲ್ಲಿ ಎರಡು ಗಂಡು ಹಾಗೂ ಒಂದು ಹೆಣ್ಣು ಮಗುವಾಗಿದೆ. ಯಾಸ್ಮಿನ್‌ತಾಜ್‌ರವರಿಗೆ ಇದು ಎರಡನೇಯ ಹೆರಿಗೆಯಾಗಿದ್ದು, ಚೊಚ್ಚಲ ಹೆರಿಗೆಯಲ್ಲಿ ಅವರಿಗೆ ಗಂಡು ಮಗುವಾಗಿತ್ತು.
ಸಿಸೇರಿಯನ್ ಮೂಲಕ ತ್ರಿವಳಿ ಮಕ್ಕಳನ್ನು ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ. ಆಸ್ಪತ್ರೆಯ ಡಾ. ಅಶ್ವಿನಿ ವೀರೇಶ್ ನೇತೃತ್ವದ ತಂಡ ಈ ಯಶಸ್ವಿ ಹೆರಿಗೆ ನಡೆಸಿದೆ ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.