ಬೆಳಗಾವಿ: ಒಗ್ಗಟ್ಟು ಪ್ರದರ್ಶಿಸದ ಕನ್ನಡಿಗ ಸಂಸದರು : ಮೇಯರ್ ಪಟ್ಟ ಎಂಇಎಸ್ ತೆಕ್ಕೆಗೆ

Update: 2017-03-01 16:42 GMT

ಬೆಳಗಾವಿ, ಮಾ.1: ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಸ್ಥಾನವು ಎಂಇಎಸ್ ಪಾಲಾಗಿದ್ದು, ಕನ್ನಡಪರ ಅಭ್ಯರ್ಥಿಗಳಿಗೆ ತೀವ್ರ ಮುಖಭಂಗವಾಗಿದೆ.

ಬುಧವಾರ ನಡೆದ ಚುನಾವಣೆಯಲ್ಲಿ ಎಂಇಎಸ್‌ನ ಸಂಜೋತಾ ಬಾಂದೇಕರ್ 32 ಮತ ಪಡೆದು ಗೆಲುವಿನ ನಗು ಬೀರಿದರೆ, ಕನ್ನಡಿಗ ಅಭ್ಯರ್ಥಿಯಾದ ಜಯಶ್ರೀ ಮಾಳಗಿ 17 ಹಾಗೂ ಪುಷ್ಪಾ 10 ಮತ ಗಳಿಸುವ ಮೂಲಕ ಸೋಲನ್ನಪ್ಪಿದರು. ಇದೇ ವೇಳೆ ಎಂಇಎಸ್ ನಾಗೇಶ್ ಮಂಡೋಳಕರ್ ಉಪಮೇಯರಾಗಿ ಆಯ್ಕೆಯಾದರು.

ಸಚಿವ ರಮೇಶ್ ಜಾರಕಿಹೊಳಿ ಬಣದಿಂದ ಜಯಶ್ರೀ ಪುಷ್ಪಾಹಾಗೂ ಶಾಸಕ ಫಿರೋಝ್ ಸೇಠ್ ಬಣದಿಂದ ಪುಷ್ಪಾಪರ್ವತಾರಾವ್ ಮೇಯರ್ ಸ್ಥಾನಕ್ಕಾಗಿ ಕಣಕ್ಕಿಳಿದಿದ್ದರು.

ಕನ್ನಡಿಗ ಸದಸ್ಯರ ಪರವಾಗಿ ಈ ಎರಡು ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಹಾಗೂ ಕನ್ನಡಿಗ ಸಂಸದರಾದ ಪ್ರಕಾಶ್ ಹುಕ್ಕೇರಿ, ಸುರೇಶ್ ಅಂಗಡಿ ಹಾಗೂ ಸಂಜಯ ಪಾಟೀಲ್ ಮತದಾನದಿಂದ ದೂರ ಉಳಿದಿದ್ದರು. ಇವು ಕನ್ನಡಪರ ಅಭ್ಯರ್ಥಿಗೆ ಮೇಯರ್ ಸ್ಥಾನ ಕೈ ತಪ್ಪಲು ಕಾರಣವಾಯಿತು ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News