ಡಬ್ಬಿಂಗ್ ವಿರೋಧಿಸುವುದು ಪಾಳೇಗಾರಿಕೆಗೆ ಸಮ: ಪ್ರಕಾಶ್ ರಾಜ್
ಬೆಂಗಳೂರು, ಮಾ4: ಡಬ್ಬಿಂಗ್ ಪ್ರತಿಯೊಬ್ಬರ ವೈಯಕ್ತಿಕ ನಿಲುವು. ಅದನ್ನು ಬೇಡವೆನ್ನುವ ಕಾಲಮಾನದಲ್ಲಿ ನಾವಿಲ್ಲ. ಡಬ್ಬಿಂಗ್ ಬೇಡವೇ ಬೇಡ ಎನ್ನುವುದು ನಮ್ಮ ಮುಂದಿರುವ ಪ್ರಶ್ನೆಯಲ್ಲ. ಡಬ್ಬಿಂಗ್ ಬರಲೇ ಬಾರದು ಎನ್ನುವುದು ಪಾಳೇಗಾರಿಕೆಯಾಗುತ್ತದೆ ಎಂದು ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್ ರಾಜ್ ಪರ ಭಾಷೆಯನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡುವವರ ಪರ ಬ್ಯಾಟಿಂಗ್ ಮಾಡಿದ್ದಾರೆ.
ಡಬ್ಬಿಂಗ್ ಪರ ಅಲ್ಲ ಎಂದಾಕ್ಷಣ ಡಬ್ಬಿಂಗ್ ತಡೆಯುವೆ ಎಂದಲ್ಲ. ಯಾವುದನ್ನೆ ಆಗಲಿ ತಡೆಯುವುದರಲ್ಲಿ ನನಗೆ ನಂಬಿಕೆಯಿಲ್ಲ. ಕಲಾವಿದರ ಹಕ್ಕನ್ನು ಪ್ರೇಕ್ಷಕರು ಗೌರವಿಸಬೇಕು. ಇದು ಕಲಾತ್ಮಕ ಕೊಡುಕೊಳ್ಳುವಿಕೆ. ದಬ್ಬಾಳಿಕೆಗೆ ಇಲ್ಲಿ ಜಾಗವಿಲ್ಲ. ಈ ಬಗ್ಗೆ ಪ್ರೇಕ್ಷಕರ ನಿರ್ಧರಿಸಲಿ. ಎಲ್ಲರ ಹಕ್ಕು ಗೌರವಿಸುವುದನ್ನು ಕಲಾವಿದರು ಕಲಿಯಬೇಕು ಎಂದು ರಾಜ್ ಅಭಿಪ್ರಾಯಪಟ್ಟರು.
ತಮಿಳು ಚಿತ್ರದ ಕನ್ನಡದ ಡಬ್ಬಿಂಗ್ ಸತ್ಯದೇವ್ ಐಪಿಎಸ್ ಕರ್ನಾಟಕದಲ್ಲಿ ಬಿಡುಗಡೆಯಾಗವುದನ್ನು ವಿರೋಧಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಶುಕ್ರವಾರ ರಾಜ್ಯವ್ಯಾಪಿ ಪ್ರತಿಭಟನೆ ನಡೆದಿತ್ತು.