×
Ad

ಯಡಿಯೂರಪ್ಪ ಬಂಟ ಕಾಪು ಸಿದ್ದಲಿಂಗಸ್ವಾಮಿ ಕತ್ತಿನ ಪಟ್ಟಿ ಹಿಡಿದು ಹೊಡೆದಾಡಿದ ಬಿಜೆಪಿ ಕಾರ್ಯಕರ್ತರು

Update: 2017-03-04 23:24 IST

ಮೈಸೂರು, ಮಾ.4: ಮೈಸೂರಿನ ಟಿ.ನರಸೀಪುರದ ಮಾದೇಶ್ವರ ಛತ್ರದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ, ಬಿಜೆಪಿ ಪದಾದಿಕಾರಿಗಳು ಪರಸ್ಪರ ಕೈ ಮಿಲಾಯಿಸಿದ ಘಟನೆ ನಡೆದಿದೆ.

ಯಡಿಯೂರಪ್ಪ ಬಂಟ ಕಾಪು ಸಿದ್ದಲಿಂಗಸ್ವಾಮಿ ವಿರುದ್ಧ ಕೆ.ಎಸ್.ಮಾದಪ್ಪ, ಗುರುಸ್ವಾಮಿ ಅವರು ಪರಸ್ಪರ ಕತ್ತಿನ ಪಟ್ಟಿ ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ.

ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಂಬರುವ ಚುನಾವಣೆಯಲ್ಲಿ ತಾನು ಸ್ವರ್ಧೆ ಮಾಡಲ್ಲ ಎಂದು ಸಿದ್ದಲಿಂಗಸ್ವಾಮಿ ಹೇಳಿದ್ದರು. ಹೀಗಾಗಿ ಸಭೆಯಲ್ಲಿ ಮತ್ತೊಬ್ಬ ಅಭ್ಯರ್ಥಿ ಸೂಚಿಸುವಂತೆ ಪದಾಧಿಕಾರಿಗಳಿಂದ ಒತ್ತಡ ಬಂದಿತ್ತು.

ಈ ವೇಳೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪ ಬಂಟ ಕಾಪು ಸಿದ್ದಲಿಂಗಸ್ವಾಮಿ ವಿರುದ್ಧ ತಿರುಗಿ ಬಿದ್ದು,  ಪರಸ್ಪರ ಕತ್ತಿನ ಪಟ್ಟಿ ಹಿಡಿದುಕೊಂಡು ಹೊಡೆದಾಡಿದರು ಎನ್ನಲಾಗಿದೆ.

ಜಗಳ ತಾರಕಕ್ಕೆ ಏರಿದಾಗ ಕಾರ್ಯಕರ್ತರು. ಸಿದ್ದಲಿಂಗಸ್ವಾಮಿಯನ್ನು ಸಭೆಯಿಂದ ಹೊರಗೆ ಕರೆದುಕೊಂಡು ಹೋದರು.

ಎಲ್ಲವನ್ನು ನೋಡಿಯೂ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News