×
Ad

ಬೆಂಕಿ ಅನಾಹುತಕ್ಕೆ ಮನೆ ಭಸ್ಮ

Update: 2017-03-05 15:09 IST

ಮುಂಡಗೋಡ, ಮಾ.5: ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಅಪಾರ ಹಾನಿಯಾದ ಘಟನೆಯೊಂದು ತಾಲೂಕಿನ ಮಳಗಿ ಗ್ರಾಪಂ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದಲ್ಲಿ ನಡೆದಿದೆ.

ಹೊಸಕೊಪ್ಪಗ್ರಾಮದ ಮಂಗಲಾ ಗಜಾನನ ಕೊಡಿಯ ಎಂಬವರ ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಮನೆಯಲ್ಲಿದ್ದ ಮಂಚ, ಕಲರ್ ಟಿ.ವಿ., 250 ಹಂಚು, ರೀಪು, ಪಕಾಸು, ಪಾತ್ರೆ, ಬಟ್ಟೆ ಬಾಗಿಲುಗಳು ಸುಟ್ಟು ಭಸ್ಮವಾಗಿದೆ. ಅನಾಹುತದಿಂದ 50-60 ಸಾವಿರರೂ. ಹಾನಿ ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಮಳಗಿ ಗ್ರಾಪಂ ಅಧ್ಯಕ್ಷೆ ರೇಖಾ ಅಂಡಗಿ, ಪಿಡಿಒ ಪರಶುರಾಮ ಮಲವಳ್ಳಿ, ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಂಗಲಾ ಕೊಡಿಯಾ, ಆನಂದ ಪೂಜಾರ ಇದ್ದರು. ಬೆಂಕಿ ಅನಾಹುತದಿಂದ ಅಪಾರ ಹಾನಿಯಾಗಿರುವ ಮಂಗಲಾ ಕೊಡಿಯಾ ಅವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮಳಗಿ ಗ್ರಾ.ಪಂ. ವತಿಯಿಂದ ಮುಂಡಗೋಡ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News