ನೇಣು ಬಿಗಿದುಕೊಂಡು ಪಿಎಸ್ಸೈ ಆತ್ಮಹತ್ಯೆ
Update: 2017-03-05 15:45 IST
ಕೊಪ್ಪಳ, ಮಾ.5: ಪಿಎಸ್ಸೈಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಪಿ.ಶಶಿಧರ ಆತ್ಮಹತ್ಯೆ ಮಾಡಿಕೊಂಡ ಪಿಎಸ್ಸೈ. ಇವರು ಕೊಪ್ಪಳ ನಗರದ ಪೊಲೀಸ್ ಕ್ವಾಟ್ರಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಶಿಧರ ಅವರ ಪುತ್ರ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದ. ಇದೇ ದುಃಖದ ಹಿನ್ನೆಲೆಯಲ್ಲಿ ಅವರು ಖಿನ್ನತೆಗೊಳಗಾಗಿದ್ದರು. ಅದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿರಬಹುದೆಂದು ಹೇಳಲಾಗಿದೆ. ಇವರು ವೈರ್‌ಲೆಸ್ ವಿಭಾಗದಲ್ಲಿ ಪಿಎಸ್ಸೈ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಘಟನೆಯ ಬಗ್ಗೆ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.