ಆನೇಕಲ್: ಆಸ್ಪತ್ರೆ ದಾಸ್ತಾನು ಕೇಂದ್ರಕ್ಕೆ ಬೆಂಕಿ
Update: 2017-03-06 19:07 IST
ಆನೇಕಲ್, ಮಾ.06: ಬೆಂಗಳೂರು-ಹೊಸೂರು ಹೆದ್ದಾರಿಯ ಯಡವನಹಳ್ಳಿ ಬಳಿಯ ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ದಾಸ್ತಾನು ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.
ಹತ್ತಿರವೇ ಇದ್ದ ಆಸ್ಪತ್ರೆಯ ಸಿಬ್ಬಂದಿ ತಕ್ಷಣ ಅತ್ತಿಬೆಲೆ ಪೊಲೀಸ್ ಠಾಣೆಯ ಸಿಬ್ಬಂದಿಗೆ ಮಾಹಿತಿ ನೀಡಿ, ನಂತರ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಾಗಲೇ ಬೆಂಕಿಯ ಕೆನ್ನಾಲಿಗೆ ಮಳಿಗೆಯಲ್ಲಿದ್ದ ಎಲ್ಲ ಸರಕುಗಳು ಸುಟ್ಟು ಭಸ್ಮವಾಗಿತ್ತು.
ಗೊಡೌನ್‌ನಲ್ಲಿ ಸಿಬ್ಬಂದಿ ಇರದ ಕಾರಣ ಸಾವು ನೋವು ಸಂಭವಿಸಲಿಲ್ಲ. ಅಗ್ನಿಶಾಮಕದಳದ ಸಿಬ್ಬಂದಿ 30 ನಿಮಿಷಗಳ ಕಾಲ ತಡವಾಗಿ ಬಂದಾಗಲೇ ಆಸ್ಪತ್ರೆಯ ಸಿಬ್ಬಂದಿ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾದರು ಎಂದು ತಿಳಿದುಬಂದಿದೆ.