×
Ad

ಗುಬ್ಬಿ: ಸಿಡಿಲು ಬಡಿದು ಇಬ್ಬರ ಸಾವು

Update: 2017-03-06 19:50 IST

ಗುಬ್ಬಿ, ಮಾ.6: ತಾಲೂಕಿನ ಕಸಬ ಹೋಬಳಿ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ  ಸಿಡಿಲು ಬಡಿದು ಇಬ್ಬರ ಸಾವಿಗೀಡಾಗಿ ಮುವರಿಗೆ ಗಾಯಗಳಾದ ಘಟನೆ ನಡೆದಿದೆ.

ಮೃತಪಟ್ಟವರನ್ನು ಮಂಜುಳ(40), ಭಾರತಿ(13) ಎಂದು ಗುರುತಿಸಲಾಗಿದೆ. ಶಿಲ್ಪ(16), ಸಂತೋಷ್(13) ಇಬ್ಬರ ಸ್ಥಿತಿ ಗಂಭೀರವಾಗಿದೆ.

ಇವರು ಕೂಲಿ ಕೆಲಸಕ್ಕೆ ತೆರಳಿದ್ದ ತಾಯಿ ಮಂಜುಳಾ ಅವರನ್ನು ಕರೆತರಲು ಹೋಗಿದ್ದ ಮೈದನ ಮಗಳಾದ ಭಾರತಿ ಮತ್ತು ಮಕ್ಕಳಾದ ಸಂತೋಷ, ಶಿಲ್ಪ ಇವರು ವಾಪಸ್ಸು ಮನೆಗೆ ಬರುವಾಗ ರವಿವಾರ 5:30 ರ ಸಮಯದಲ್ಲಿ ಮಳೆ ಬಂದ ಹಿನ್ನಲೆ ಮರದ ಆಶ್ರಯ ಪಡೆಯುತ್ತಿದ್ದರು.

ಈ ಸಂದರ್ಭದಲ್ಲಿ ಸಿಡಿಲು ಬಡಿದು ಮಂಜುಳ, ಭಾರತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಿಲ್ಪ ಮತ್ತು ಸಂತೋಷ್ ಅವರನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News