ಬೀದಿ ನಾಯಿ ದಾಳಿಗೆ ಸಿಲುಕಿದ್ದ ಜಿಂಕೆ ರಕ್ಷಣೆ
Update: 2017-03-07 18:26 IST
ಗುಂಡ್ಲುಪೇಟೆ, ಮಾ.7: ಕಾಡಿನಿಂದ ಹೊರಬಂದು ಬೀದಿ ನಾಯಿಗಳ ದಾಳಿಗೆ ಸಿಲುಕಿದ್ದ ಒಂದೂವರೆ ವರ್ಷದ ಗಂಡು ಜಿಂಕೆಯನ್ನು ಗ್ರಾಮಸ್ಥರು ರಕ್ಷಿಸಿರುವ ಘಟನೆ ತಾಲೂಕಿನ ಕುರುಬರಹುಂಡಿ ಗ್ರಾಮದಲ್ಲಿ ನಡೆದಿದೆ.
ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ ಅರಣ್ಯದಿಂದ ಹೊರಬಂದ ಜಿಂಕೆಯನ್ನು ಸೀಳು ನಾಯಿಗಳು ಬೆನ್ನಟ್ಟಿದ ಪರಿಣಾಮವಾಗಿ ಸಮೀಪದ ಕುರುಬರಹುಂಡಿ ಗ್ರಾಮಕ್ಕೆ ಬಂದಿದೆ.ಜಿಂಕೆಯನ್ನು ಕಂಡ ಗ್ರಾಮದ ಬೀದಿನಾಯಿಗಳು ಬೆನ್ನಟ್ಟುತ್ತಿದ್ದಂತೆ ಗ್ರಾಮಸ್ಥರಾದನಂಜಪ್ಪ, ವೃಷಭೇಂದ್ರಪ್ಪ, ಗುರುಮಲ್ಲಪ್ಪ, ಮಹದೇವಸ್ವಾಮಿ ಹಾಗೂ ಚನ್ನಪ್ಪ ಜಿಂಕೆಯನ್ನು ದಾಳಿಯಿಂದ ರಕ್ಷಿಸಿದ್ದಾರೆ.
ಓಡಿ ಸುಸ್ತಾಗಿದ್ದ ಜಿಂಕೆಗೆನೀರು ಕುಡಿಸಿದ ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಓಂಕಾರ್ ವಲಯದ ಡಿಆರ್‌ಎಫ್‌ಓ ಮೈಲಾರಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿ ಜಿಂಕೆಯನ್ನು ಅರಣ್ಯಕ್ಕೆ ಕೊಂಡೊಯ್ದರು.