×
Ad

ಒಂದೇ ಕುಟುಂಬದ ಮೂವರು ನೇಣು ಬಿಗಿದು ಆತ್ಮಹತ್ಯೆ

Update: 2017-03-08 11:25 IST

ತುಮಕೂರು,ಮಾ.08: ಬರಗಾಲದ ಹಿನ್ನೆಲೆಯಲ್ಲಿ ಕೈಗೆ ಬೆಳೆ ಬಾರದೆ ಪಡೆದ ಸಾಲ ತೀರಿಸಲಾಗದೆ ನೊಂದ ರೈತರೊಬ್ಬರು ಪತ್ನಿ ಹಾಗೂ ಮಗಳೊಂದಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಳ್ಳಂಬೆಳ್ಳ ಹೋಬಳಿ ಹೊಸಬಿಜ್ಜನಬೆಳ್ಳ ಗ್ರಾಮದ ಸಿದ್ಧಪ್ಪ(44), ಪತ್ನಿ ತಾಯಮ್ಮ (36) ಹಾಗೂ ಮಗಳು ಉಮಾದೇವಿ(14) ಆತ್ಮಹತ್ಯೆಗೆ ಶರಣಾದವರು.

ಸಿದ್ಧಪ್ಪ ಬ್ಯಾಂಕ್‌ನಿಂದ ಹಾಗೂ ಕೈ ಸಾಲ ಮಾಡಿ ತನ್ನ 10 ಎಕರೆ ಜಮೀನಿನಲ್ಲಿ ಶೇಂಗಾ ಬೆಳೆ ಹಾಕಿದ್ದರು.ಒಂದು ಕಡೆ ಮಳೆ ಕೈಕೊಟ್ಟರೆ, ಮತ್ತೊಂದು ಕಡೆ ಬರಗಾಲದ ಹಿನ್ನೆಲೆಯಲ್ಲಿ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ.

ತನ್ನ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡೇ ಸಾಲ ತೀರಿಸಲು ಅಡುಗೆ ಕೆಲಸಕ್ಕೂ ಸಹ ಸಿದ್ಧಪ್ಪ ಹೋಗುತ್ತಿದ್ದರು. ಆದರೂ ಆರ್ಥಿಕ ಸಂಕಷ್ಟ ಸುಧಾರಿಸದ ಕಾರಣ ಬೇಸತ್ತು ಕುಟುಂಬದೊಂದಿಗೆ ತಡರಾತ್ರಿ ತನ್ನ ಹೊಲದ ಬಳಿ ಹೋಗಿ ಹುಣಸೇ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಂದು ಬೆಳಗಿನ ಜಾವ ಈ ಮಾರ್ಗದಲ್ಲಿ ಹೋಗುತ್ತಿದ್ದ ಸ್ಥಳೀಯರು ಸಿದ್ದಪ್ಪ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವುದನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಕಳ್ಳಂಬೆಳ್ಳ ಠಾಣೆ ಪಿಎಸ್‌ಐ ಚಂದ್ರಶೇಖರ್,ಸಿಬ್ಬಂದಿಯೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೂವರ ಶವಗಳನ್ನು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News