×
Ad

ನಟ ಸುದೀಪ್ ನೋಡಬೇಕೆಂಬ ಹಠದಲ್ಲಿ ಆತ್ಮಹತ್ಯೆಗೆತ್ನಿಸಿದ ಅಭಿಮಾನಿಗಳು!

Update: 2017-03-08 12:38 IST

ಬೆಳಗಾವಿ, ಮಾ.8: ಇದನ್ನು ಹುಚ್ಚು ಅಭಿಮಾನ ಎಂದು ಹೇಳಿದರೂ ತಪ್ಪಾಗದು. ನಟ ಸುದೀಪ್ ಬೆಳಗಾವಿಗೆ ಬರಲಿಲ್ಲ ಎಂಬ ಬೇಸರದಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಯುವಕರಿಬ್ಬರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಲು ಮುಂದಾದ ಘಟನೆ ಬುಧವಾರ ನಡೆದಿದೆ.

ಇತ್ತೀಚೆಗೆ ಬಿಡುಗಡೆಯಾದ ‘ಹೆಬ್ಬುಲಿ’ ಚಿತ್ರದ ಪ್ರಚಾರಕ್ಕಾಗಿ ಸುದೀಪ್ ಬೆಳಗಾವಿಗೆ ಬರುತ್ತಾರೆಂದು ಕಳೆದ ಎರಡು ದಿನಗಳಿಂದ ಹೇಳಲಾಗುತ್ತಿತ್ತು. ನಾಳೆಯಿಂದ ಪಿಯುಸಿ ಪರೀಕ್ಷೆ ಬರೆಯಬೇಕಾಗಿದ್ದ ಇಬ್ಬರು ಯುವಕರು ಪರೀಕ್ಷೆಯ ಬಗ್ಗೆ ತಲೆಕೆಡಿಸಿಕೊಳ್ಳದೇ ಸುದೀಪ್ ಬೆಳಗಾವಿಗೆ ಬರಲಿಲ್ಲ ಎಂಬ ಬೇಸರದಲ್ಲಿ ಬಾಟಲಿಯಲ್ಲಿ ಪೆಟ್ರೊಲ್ ತುಂಬಿಸಿಕೊಂಡು, ಬೆಂಕಿಪೊಟ್ಟಣ ಹಿಡಿದುಕೊಂಡು ಚೆನ್ನಮ್ಮ ವೃತ್ತದ ಬಳಿ ಆತ್ಮಹತ್ಯೆಗೆ ಮುಂದಾಗಿದ್ದರು.

ಸ್ಥಳಕ್ಕೆ ಆಗಮಿಸಿದ ಡಿಸಿಪಿ ರೋಹಿಣಿ ಮಾಹಿತಿ ಪಡೆದರು. ಇಬ್ಬರು ಯುವಕರನ್ನು ವಶಕ್ಕೆ ಪಡೆದುಕೊಂಡ ಖಡೇಜಜಾರ್ ಪೊಲೀಸರು ಪೆಟ್ರೋಲ್ ತುಂಬಿಸಿದ್ದ ಬಾಟಲಿ, ಬೆಂಕಿಪೊಟ್ಟಣವನ್ನು ವಶಕ್ಕೆ ಪಡೆದರು. ಅದರಲ್ಲಿ ಓರ್ವ ಯುವಕ ಮೈಯಲ್ಲಿ ಕಿಚ್ಚ ಸುದೀಪ್ ಎಂದು ಹಜ್ಜೆ ಬರೆಸಿಕೊಂಡಿದ್ದ.,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News