ಜಯಪ್ರಕಾಶ್ ಹೆಗ್ಡೆ ಬಿಜೆಪಿಗೆ ಸೇರ್ಪಡೆ
Update: 2017-03-08 13:03 IST
ಬೆಂಗಳೂರು,ಮಾ.8: ಉಡುಪಿ ಜಿಲ್ಲೆಯ ಮಾಜಿ ಕಾಂಗ್ರೆಸ್ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಮೂಡುಬಿದಿರೆ ಕಾಂಗ್ರೆಸ್ ಮುಖಂಡ ಮೇಘನಾಥ ಶೆಟ್ಟಿ, ಹೊಸಪೇಟೆ ತಾಲೂಕಿನ ಮಾಜಿ ಶಾಸಕ ರತನ್ ಸಿಂಗ್ ಬುಧವಾರ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಮಲ್ಲೇಶ್ವರಂನಲ್ಲಿ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮೂವರಿಗೆ ಪಕ್ಷದ ಧ್ವಜವನ್ನು ನೀಡಿ ಕಮಲ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಕಾರ್ಕಳ ಶಾಸಕ ಸುನಿಲ್‌ಕುಮಾರ್, ಮಾಜಿ ಸಚಿವ ನಾಗರಾಜ್ ಶೆಟ್ಟಿ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಆರ್. ಅಶೋಕ್, ವಿ.ಸೋಮಣ್ಣ ಮತ್ತಿತರರು ನಾಯಕರಿದ್ದರು.
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರ ಹಾಗೂ ಕಾಂಗ್ರೆಸ್‌ನ ಮಾಜಿ ಸಚಿವ ಕುಮಾರ ಬಂಗಾರಪ್ಪ ಗುರುವಾರ ಬಿಜೆಪಿಗೆ ಸೇರಲಿದ್ದಾರೆ.