ಚಲಿಸುತ್ತಿದ್ದ ಹತ್ತಿ ಸಾಗಣೆ ಲಾರಿಗೆ ಬೆಂಕಿ
Update: 2017-03-08 19:45 IST
ತುಮಕೂರು.ಮಾ.08:ಅತ್ತಿಬೆಲೆಯಿಂದ ದೆಹಲಿಗೆ ಹತ್ತಿ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ತುಮಕೂರು ನಗರದ ಅಂತರಸನಹಳ್ಳಿ ಬೈಪಾಸ್ ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಮಹಾರಾಷ್ಟ್ರ ರಿಜಿಸ್ಟಾರ್ ನಂಬರ್ ಇರುವ ಲಾರಿ ದೆಹಲಿಯ ಬಟ್ಟೆ ಕಾರ್ಖಾನೆಯೊಂದಕ್ಕೆ ಹತ್ತಿಯನ್ನು ತುಂಬಿಕೊಂಡು ಹೋಗುತಿದ್ದು, ಬುಧವಾರ ಸಂಜೆ 4.30ರ ಸುಮಾರಿಗೆ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಎಚ್ಚೆತ್ತುಕೊಂಡ ಲಾರಿ ಚಾಲಕ ಮತ್ತು ಕ್ಲೀನರ್, ತಕ್ಷಣವೇ ಲಾರಿಯನ್ನು ನಿಲ್ಲಿಸಿ ಆಗ್ನಿಶಾಮಕ ದಳದವರಿಗೆ ದೂರವಾಣಿ ಕರೆ ಮಾಡಿದ್ದಾರೆ.
ಅಗ್ನಿ ಶಾಮಕ ದಳದವರು ಆಗಮಿಸುವ ವೇಳೆ ಹತ್ತಿಯ ಕೆಲ ಬಂಡಲ್‌ಗಳು ಸುಟ್ಟು ಹೋಗಿದ್ದು, ಇನ್ನೂ ಕೆಲ ಬಂಡಲ್‌ಗಳಿಗೆ ಬೆಂಕಿ ತಗುಲಿದೆ.
ಚಲಿಸುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಕೆಲ ಕಾಲ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.