ಸಾಧಕಿಯರಿಗೆ ನಾರಿ ಶಕ್ತಿ ಪುರಸ್ಕಾರ..!
Update: 2017-03-09 00:15 IST
ಮಹಿಳಾ ದಿನಾಚರಣೆಯ ಅಂಗವಾಗಿ ಹೊಸದಿಲ್ಲಿಯ ರಾಷ್ಟ್ರಪತಿಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು 33 ಮಂದಿ ಮಹಿಳಾ ಸಾಧಕಿಯರಿಗೆ 2016ನೆ ಸಾಲಿನ ನಾರಿ ಶಕ್ತಿ ಪುರಸ್ಕಾರ ಪ್ರದಾನ ಮಾಡಿದರು. ಇತ್ತೀಚೆಗೆ ಇಸ್ರೋ ಏಕಕಾಲಕ್ಕೆ ನಡೆಸಿದ 104 ಉಪಗ್ರಹಗಳ ಉಡಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ, ಕರ್ನಾಟಕದವರಾದ ಬಾಹ್ಯಾಕಾಶ ವಿಜ್ಞಾನಿ ಅನಟ್ಟಾ ಸೋನಿ ಹಾಗೂ ಮಕ್ಕಳ ಕಳ್ಳಸಾಗಣೆ ವಿರುದ್ಧ ಪ್ರಬಲ ಹೋರಾಟ ನಡೆಸಿದ ಪ.ಬಂಗಾಳದ ಅನೊಯಾರಾ ಖಾತೂನ್, ಆ್ಯಸಿಡ್ ದಾಳಿ ಸಂತ್ರಸ್ತೆಯರ ಧ್ವನಿಯಾಗಿರುವ ಛನ್ವ್ ಪ್ರತಿಷ್ಠಾನದ ಪರ ಆ್ಯಸಿಡ್ ದಾಳಿ ಸಂತ್ರಸ್ತೆ ರೂಪಾ ಮತ್ತಿತರರು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.