" ಮನುವಾದ ನಮ್ಮನ್ನು ಕತ್ತಲಲ್ಲಿ ಇಟ್ಟಿದೆ "
ಕೊಪ್ಪಳ, ಮಾ.9: ಕೊಪ್ಪಳದಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ರ‍್ಯಾಲಿ ಉದ್ಗಾಟಿಸಿದ ಮಾತನಾಡಿದ ಹೈದರಾಬಾದಿನ ದಲಿತ ಹೋರಾಟಗಾರ್ತಿ ಗೋಗು ಶ್ಯಾಮಲ ಅವರ ಭಾಷಣದ ಅಂಶಗಳು ಇಲ್ಲಿವೆ.
ಕಾಮನಬಿಲ್ಲಿನ ಬಣ್ಣದ ಚಿತ್ತಾರ:
ಮೊದಲು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟಕ್ಕೆ ಸ್ವಾಗತ. ಈ ದಿನ ತುಂಬಾ ದೊಡ್ಡ ಸಮಾವೇಶ ಮಾಡಿದ್ದೀರಿ. ನನಗೆ ಇಂದು ಇದು ಕಾಮನಬಿಲ್ಲಿನ ಬಣ್ಣದ ಚಿತ್ತಾರದ ರೀತಿ ಕಾಣುತ್ತಿದೆ. ಈದಿನದ ವಿಶೇಷ, ಮಹಿಳೆಯರು ಸಮಾನತೆಗಾಗಿ ಕೊಪ್ಪಳದ ಬಿಸಿಲಿನಲ್ಲಿ ನಡೆಯುತ್ತಿರುವುದೇ ಆಗಿದೆ. ಇದು ಪ್ರಪಂಚಕ್ಕೆ ದಿಕ್ಸೂಚಿಯಾಗಿದೆ.
ಕೊಪ್ಪಳದ ಈ ಕಾರ್ಯಕ್ರಮದ ವಿಶೇಷತೆ ಎಲ್ಲಾ ಜಾತಿಯ, ಎಲ್ಲಾ ಸಮುದಾಯದ ಎಲ್ಲಾ ಸಂಘಟನೆಯ ಎಲ್ಲರೂ ಒಂದೇ ವೇದಿಕೆಯಡಿ ಬಂದು ಸಮಾನ ಹಕ್ಕುಗಳನ್ನು ಕೇಳುತ್ತಿದ್ದಾರೆ ಎಂಬುದು. ಇಲ್ಲಿ ಹಬ್ಬದ ವಾತಾವರಣ ಇದೆ. ಇಷ್ಟೊಂದು ಜನರನ್ನು ಸೇರಿಸಿದ ಸಂಘಟಕರಿಗೆ ಹೃದಯವೈಶ್ಯಾಲತೆ ಇದೆ. ನನಗೆ ಎಲ್ಲರೂ ಸುಂದರವಾಗಿ ಕಾಣುತ್ತಿದ್ದಾರೆ. ಈ ನೆಲಕ್ಕೆ ಅಕ್ಕಮಹಾದೇವಿ, ಸಾವಿತ್ರಿ ಬಾಯಿ ಫುಲೆ ಅಂತವರ ಇತಿಹಾಸವಿದೆ. ನಮ್ಮ ಹಿಂದಿನ ಪರಂಪರೆಗಳಿವೆ....ಇವುಗಳಿಂದ ಪರ್ಯಾಯವನ್ನು ಪಡೆಯಬಹುದು ಎಂಬುವುದಕ್ಕೆ ಈ ಸಮಾವೇಶವೇ ಸಾಕ್ಷಿ
ಮನುವಾದ ನಮ್ಮನ್ನು ಕತ್ತಲಲ್ಲಿ ಇಟ್ಟಿದೆ:
ನಮ್ಮ ಮೇಲೆ ಹಿಂಸೆ ಅತ್ಯಾಚಾರ ನಡೆಯುತ್ತಿದೆ. ಇದನ್ನು ವಿರೋಧಿಸಬೇಕು. ಈ ಜಾಗತೀಕರಣದ ನಂತರ ಬಂಡವಾಳವಾದ ಮತ್ತು ಮನುವಾದ ನಮ್ಮನ್ನು ಕತ್ತಲಲ್ಲಿ ಇಟ್ಟಿದೆ. ಸಮಾಜ ಕೊಳೆಯುತ್ತಿದೆ. ಜನರಿಗೆ ವಸತಿಯಿಲ್ಲ. ಬಡತನ ತಾಂಡವವಾಡುತ್ತಿದೆ. ನಮ್ಮಲ್ಲಿ ಸಂಪನ್ಮೂಲಗಳು ಇವೆ. ಆದರೂ ಉಪಯೋಗಕ್ಕೆ ಬರುತ್ತಿಲ್ಲ. ನಮ್ಮ ಪ್ರತಿಭೆ ಬಳಕೆಯಾಗುತ್ತಿಲ್ಲ. ಕೃಷಿ, ಆದಿವಾಸಿಗಳ ಬೇಸಾಯವನ್ನು ಕಿತ್ತುಕೊಳ್ಳುತ್ತಿದ್ದಾರೆ. ಕೌಶ್ಯಲ್ಯ ಇರುವ ಜನರನ್ನು ಸಂತ್ರಸ್ತರನ್ನಾಗಿ ಮಾಡಿ ಶೋಷಿಸಲಾಗುತ್ತದೆ.
ಮನುವಾದ ,ಬ್ರಾಹ್ಮಣ್ಯವಾದಕ್ಕೆ ಪ್ರತಿರೋಧ ಹಿಂದೆಯೇ ಬಂದಿದ್ದು ಆ ಪಗರತಿರೋಧವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ.
ಶೋಷಣೆಯಲ್ಲಿರುವ ಮಹಿಳೆಯರು ಒಂದಾದರೆ ಗೆಲುವು ನಮ್ಮದೇ:
ಅಂಚಿನಲ್ಲಿರುವ, ಶೋಷಣೆಯಲ್ಲಿರುವ ಮಹಿಳೆಯರು ಒಂದಾದರೆ ಖಂಡಿತ ಗೆಲುವು ನಮ್ಮದೇ. 5 ವರ್ಷದ ಹಿಂದೆ ಕರ್ನಾಟಕದಲ್ಲಿ ಹುಟ್ಟಿದ ಈ ರೀತಿಯ ಐಕ್ಯ ಹೋರಾಟಕ್ಕೆ ಬಹಳ ಮಹತ್ವವಿದೆ. ಮತ್ತು ದಕ್ಷಿಣ ಭಾರತದಲ್ಲಿ ಇಂತಹ ಸಂಸ್ಕೃತಿ ಹುಟ್ಟಿಬೇಕಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದರೆ ಸಮಾನತೆ, ಜ್ಞಾನ, ಪ್ರತಿಭೆಯೆಂದು ಭಾವಿಸುತ್ತೇನೆ. ಇಂತಹ ದಿನಗಳುಮುಂದೆ ಬರುತ್ತವೆ ಎಂದು ಆಶಿಸುತ್ತೇನೆ. ಅವಕಾಶಕ್ಕಾಗಿ ಮತ್ತು ಕೊಪ್ಪಳ ಸೀರೆಯನ್ನು ಕೊಡುಗೆಯಾಗಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
ನಮ್ಮಲ್ಲೂ ಮಹಿಳಾ ಚಳವಳಿಗಳಿವೆ. ನಾವೂ ಇದೇ ರೀತಿಯ ಹೋರಾಟವನ್ನು ಮಾಡುತ್ತೇವೆ. ನಾವು ನಿಮ್ಮ ಋಣದಲ್ಲಿದ್ದೇವೆ. ನಮ್ಮ ಪ್ರತಿಭೆಯ ಮೇಲೆ ನಮಗೆ ಹಕ್ಕಿದೆ.
ಸಮಾನತೆ ನಮ್ಮ ಹಕ್ಕು. ಧನ್ಯವಾದಗಳು.